Belagavi, ಮೇ 19 -- ಬೆಳಗಾವಿ: ಕರ್ನಾಟಕದ ಬಂಡೀಪುರ, ನಾಗರಹೊಳೆ, ಭದ್ರಾ ಸೇರಿದಂತೆ ಹುಲಿ ಯೋಜಿತ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಆರ್ಥಿಕ ನೆರವಿನೊಂದಿಗೆ ಈಗಾಗಲೇ ಅರಣ್ಯ ನಿವಾಸಿಗಳ ಸ್ಥಳಾಂತರ ಯೋಜನೆ ಜಾರಿಯಾಗಿವೆ. ನೂರಾರು ಗಿರಿಜನ,ಆದಿವಾಸಿ ಕುಟುಂಬಗಳ ಅರಣ್ಯದಿಂದ ಹೊರಗೆ ಬದುಕು ಕಟ್ಟಿಕೊಂಡಿವೆ. ಇದೇ ಮಾದರಿಯಲ್ಲಿ ಕರ್ನಾಟಕ- ಗೋವಾ ಗಡಿ ಭಾಗದಲ್ಲಿರುವ ಭೀಮಗಡ ಅಭಯಾರಣ್ಯದಲ್ಲಿ ಶತಮಾನಗಳಿಂದ ಬದುಕು ಕಂಡುಕೊಂಡಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಯೋಜನೆ ಆರಂಭಗೊಂಡಿದೆ. ಮೊದಲ ಬಾರಿಗೆ 27 ಕುಟುಂಬಗಳು ಭೀಮಗಡ ಅರಣ್ಯದಿಂದ ಹೊರಕ್ಕೆ ಬಂದಿದ್ದು, ಅವರಿಗೆ ಆರ್ಥಿಕ ನೆರವಿನ ಜತೆಗೆ ಮೂಲಸೌಕರ್ಯಗಳನ್ನು ಕರ್ನಾಟಕ ಅರಣ್ಯ ಇಲಾಖೆಯೇ ಒದಗಿಸಲಾಗುತ್ತಿದೆ. ಕರ್ನಾಟಕ ಅರಣ್ಯ ಇಲಾಖೆಯಿಂದಲೇ ರೂಪಿಸಿರುವ ಮೊದಲ ಸ್ಥಳಾಂತರ ಯೋಜನೆಯಿದು.

ಹೇಗಿರಲಿದೆ ಯೋಜನೆ

ಭೀಮಗಡ ಅಭಯಾರಣ್ಯ ವ್ಯಾಪ್ತಿಯಲ್ಲಿ 13 ಗ್ರಾಮಗಳಿದ್ದು ಇಲ್ಲಿ ಸುಮಾರು 754 ಕುಟುಂಬಗಳು ವಾಸಿಸುತ್ತಿವೆ. ಈ...