ಭಾರತ, ಫೆಬ್ರವರಿ 24 -- ಬೆಳಗಾವಿ: ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕ ಮತ್ತು ಚಾಲಕರ ಮೇಲಿನ ಹಲ್ಲೆ ಪ್ರಕರಣದ ಕಾರಣ ಕರ್ನಾಟಕ ಹಾಗೂ ಮಹಾರಾಷ್ಟ್ರ ನಡುವೆ ಭಾನುವಾರವೂ ಬಸ್‌ ಸಂಚಾರ ಇರಲಿಲ್ಲ. ಬಸ್‌ ನಿರ್ವಾಹಕ ಮತ್ತು ಚಾಲಕ ಮೇಲಿನ ಹಲ್ಲೆ ಪ್ರಕರಣದ ಬಳಿಕ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಬಸ್‌ಗಳ ಸಂಚಾರ ವ್ಯತ್ಯಯವಾಗಿದೆ. ಶನಿವಾರ ಮುಸ್ಸಂಜೆ 7ರ ಬಳಿಕ ಎರಡೂ ಕಡೆಯ ಬಸ್‌ಗಳ ಸಂಚಾರ ಗಡಿಯವರೆಗೆ ಮಾತ್ರ ಸೀಮಿತಗೊಂಡಿದೆ.

ಬೆಳಗಾವಿಯಿಂದ ಮಹಾರಾಷ್ಟ್ರದ ವಿವಿಧ ನಗರಗಳಿಗೆ ನಿತ್ಯ 90 ಬಸ್‌ ಸಂಚರಿಸುತ್ತಿದ್ದವು. ಆದರೆ, ಪೊಲೀಸರ ಸೂಚನೆ ಮೇರೆಗೆ ವಾಯವ್ಯ ಸಾರಿಗೆ ಸಂಸ್ಥೆಯವರು ಶನಿವಾರ ಮುಸ್ಸಂಜೆ 7ಕ್ಕೆ ಮಹಾರಾಷ್ಟ್ರಕ್ಕೆ ಬಸ್‌ ಸಂಚಾರ ಸ್ಥಗಿತಗೊಳಿಸಿದರು. ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿಯವರೆಗೆ (ಕರ್ನಾಟಕ-ಮಹಾರಾಷ್ಟ್ರ ಗಡಿಯವರೆಗೆ) ಮಾತ್ರ ಬಸ್‌ ಹೋಗುತ್ತಿವೆ.

ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕ ಮತ್ತು ಚಾಲಕರ ಮೇಲಿನ ಹಲ್ಲೆ ಪ್ರಕರಣದ ಕಾರಣ ಬೆಳ...