ಭಾರತ, ಫೆಬ್ರವರಿ 15 -- Lavoo Suryaji Mamledar Passes Away: ಬೆಳಗಾವಿಗೆ ಬಂದ ಗೋವಾದ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಅವರ ಜತೆಗೆ ಆಟೋ ಚಾಲಕ ಸಂಘರ್ಷಕ್ಕೆ ಇಳಿದು ಹಲ್ಲೆ ನಡೆಸಿದ ಕಾರಣ ಅವರು ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮೃತ ಮಾಜಿ ಶಾಸಕ ಲಾವೂ ಸೂರ್ಯಾಜಿ ಮಾಮಲೇದಾರ್ ಅವರಿಗೆ 69 ವರ್ಷ ವಯಸ್ಸಾಗಿತ್ತು. ಅವರು ಗೋವಾ ವಿಧಾನಸಭೆಯಲ್ಲಿ ಪೋಂಡಾ ಕ್ಷೇತ್ರವನ್ನು 2012 ರಿಂದ 2017ರ ತನಕ ಪ್ರತಿನಿಧಿಸಿದ್ದರು.

ಗೋವಾ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಲಾವೂ ಸೂರ್ಯಾಜಿ ಮಾಮಲೇದಾರ್ ಅವರ ಕಾರು ಬೆಳಗಾವಿಯ ಖಡೇಬಜಾರ್‌ ಬಳಿ ಆಟೋಗೆ ಒರೆಸಿಕೊಂಡು ಸಾಗಿತ್ತು. ಅದು ಅರಿವಿಗೆ ಬಾರದ ಕಾರು ಚಾಲಕ ತನ್ನ ಪಾಡಿಗೆ ಕಾರು ತಂದು ಶ್ರೀನಿವಾಸ ಲಾಡ್ಜ್‌ ಎದುರು ನಿಲ್ಲಿಸಿದ್ದ. ಕಾರಿನಿಂದ ಇಳಿದ ಲಾವೂ ಸೂರ್ಯಾಜಿ ಮಾಮಲೇದಾರ್ ಮೆಟ್ಟಿಲೇರಿ ಲಾಡ್ಜ್‌ ಒಳಗೆ ಹೊರಟಿದ್ದರು. ಆಗ ಲಾಡ್ಜ್‌ ಬಳಿಗೆ ಬಂದ ಆಟೋ ಚಾಲಕ ನೇರವಾಗಿ ಹೋಗಿ ಲಾವೂ ಸೂರ್ಯಾಜಿ ಮಾಮಲೇದಾರ್ ಜತೆಗೆ ಜಗಳಕ್ಕೆ ಇಳಿದು, ಮೇಲೆ ಏಕಾಕಿ ಹಲ್ಲೆ ನಡೆಸಿದ್ದ. ಇದರಿಂ...