Bangalore, ಏಪ್ರಿಲ್ 23 -- ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ಮತ್ತು ಅನುಕೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರ್ನಾಟಕದಲ್ಲಿ ಸಂಚರಿಸುವ ಪ್ರಮುಖ ಮೂರು ಜೋಡಿ ಎಕ್ಸ್‌ಪ್ರೆಸ್ ರೈಲುಗಳ ಹಳೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಬೋಗಿಗಳ ಬದಲಿಗೆ ಸುಧಾರಿತ ಲಿಂಕೆ ಹಾಫ್‌ಮನ್ ಬುಶ್ (ಎಲ್‌ಎಚ್‌ಬಿ) ಬೋಗಿಗಳನ್ನು ಅಳವಡಿಸಲು ಹುಬ್ಬಳ್ಳಿ ಕೇಂದ್ರಿತ ನೈಋತ್ಯ ರೈಲ್ವೆಯು ನಿರ್ಧರಿಸಿದೆ. ಈ ನೂತನ ಬೋಗಿಗಳು ಪ್ರಯಾಣಿಕರಿಗೆ ಹೆಚ್ಚು ಭದ್ರತೆ ಮತ್ತು ಉತ್ತಮ ಪ್ರಯಾಣದ ಅನುಭವವನ್ನು ನೀಡಲಿವೆ. ಬೆಳಗಾವಿ -ಮೈಸೂರು, ಮೈಸೂರು- ಬೆಳಗಾವಿ, ಬಾಗಲಕೋಟೆ- ಮೈಸೂರು, ಮೈಸೂರು-ಬಾಗಲಕೋಟೆ, ಹುಬ್ಬಳ್ಳಿ ಹಾಗೂ ಚೆನ್ನೈ ನಡುವಿನ ರೈಲುಗಳಿಗೆ ಹೊಸ ವಿನ್ಯಾಸದ ಬೋಗಿಗಳು ಬರಲಿವೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.ಪರಿಷ್ಕೃತ ಎಲ್‌ಎಚ್‌ಬಿ ಬೋಗಿಗಳೊಂದಿಗೆ ಕಾರ್ಯನಿರ್ವಹಿಸಲಿರುವ ರೈಲುಗಳ ವಿವರ ಹೀಗಿವೆ:

1. ರೈಲು ಸಂಖ್ಯೆ 17301 ಬೆಳಗಾವಿ - ಮೈಸೂರು ಎಕ್ಸ್‌ಪ್ರೆಸ್ ರೈಲು ...