ಭಾರತ, ಏಪ್ರಿಲ್ 21 -- ಟಾಲಿವುಡ್ ನಟ ಅಜಿತ್ ಕುಮಾರ್ ಆ್ಯಕ್ಟಿಂಗ್‌ನಲ್ಲಿ ಮಾತ್ರವಲ್ಲ, ಕಾರ್ ರೇಸಿಂಗ್‌ನಲ್ಲೂ ಸಖತ್ ಕ್ರೇಜ್ ಹೊಂದಿದ್ದಾರೆ. ಆಗಾಗ ಕಾರ್ ರೇಸಿಂಗ್‌ನಲ್ಲಿ ಸ್ಪರ್ಧೆಗಳಲ್ಲಿ ಇವರು ಭಾಗವಹಿಸುತ್ತಾರೆ. ಕಳೆದ ಜನವರಿಯಲ್ಲಿ ದುಬೈನಲ್ಲಿ ನಡೆದ ಕಾರ್ ರೇಸಿಂಗ್ ಸ್ಪರ್ಧೆ 24H ದುಬೈ ರೇಸಿಂಗ್‌ನಲ್ಲಿ 3ನೇ ಸ್ಥಾನ ಪಡೆದ ಅಜಿತ್ ತಂಡ ಈಗ ಬೆಲ್ಜಿಯಂನಲ್ಲಿ 2ನೇ ಸ್ಥಾನ ಗಳಿಸಿದೆ. ಈ ಹಿಂದೆ ಕಾರ್ ರೇಸಿಂಗ್‌ನಲ್ಲಿ ಭಾಗವಹಿಸಿದ್ದಾಗ ಅವರ ಕಾರು ಅಪಘಾತಕ್ಕೆ ಒಳಗಾಗಿದ್ದನ್ನೂ ಈ ಹೊತ್ತಿನಲ್ಲಿ ನೆನಪಿಸಿಕೊಳ್ಳಬಹುದು. ಆದರೆ ಇದೀಗ ಅವರ ಸಾಧನೆಗೆ ಫಲ ಸಿಕ್ಕಿದೆ.
ಬೆಲ್ಜಿಯಂನಲ್ಲಿ ನಡೆದ ಸ್ಪಾ-ಫ್ರಾಂಕೋರ್‌ಚಾಂಪ್ಸ್ ಸರ್ಕ್ಯೂಟ್ ಕಾರ್ ರೇಸಿಂಗ್ ಸ್ಪರ್ಧೆಯಲ್ಲಿ ಅಜಿತ್ ರೇಸಿಂಗ್ ತಂಡ ಎರಡನೇ ಸ್ಥಾನ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಅಜಿತ್ ಕುಮಾರ್ ರೇಸಿಂಗ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಲಾಗಿದೆ. 'ಇದು ಭಾರತೀಯ ಮೋಟಾರ್ ಸ್ಪೋರ್ಟ್‌ಗೆ ಹೆಮ್ಮೆಯ ಕ್ಷಣ' ಎಂದು ಬರೆದುಕೊಳ್ಳಲಾಗಿದೆ.
ಇದನ್ನೂ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.