ಭಾರತ, ಫೆಬ್ರವರಿ 9 -- ಬೆನ್ ಡಕೆಟ್ (65) ಮತ್ತು ಜೋ ರೂಟ್ (69) ಅವರ ಆಕರ್ಷಕ ಅರ್ಧಶತಕಗಳ ಮತ್ತು ಲಿಯಾಮ್ ಲಿವಿಂಗ್​ಸ್ಟನ್ (41) ಸ್ಫೋಟಕ ಆಟದ ಸಹಾಯದಿಂದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಮೊತ್ತ ಪೇರಿಸಿದೆ. ಕಟಕ್​ನ ಬಾರಾಬತಿ ಕ್ರಿಕೆಟ್​ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 49.5 ಓವರ್​​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 304 ರನ್ ಕಲೆ ಹಾಕಿದ್ದು, ಮತ್ತೊಮ್ಮೆ 50 ಓವರ್​ಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಅಂತಿಮ ಓವರ್​ನಲ್ಲಿ ಎರಡು ವಿಕೆಟ್​ ಕಳೆದುಕೊಂಡು ಒಂದು ಎಸೆತ ಬಾಕಿ ಇರುವಂತೆ ಸರ್ವಪತನ ಕಂಡಿದೆ.

Published by HT Digital Content Services with permission from HT Kannada....