ಭಾರತ, ಫೆಬ್ರವರಿ 2 -- ಬೆಕ್ಕನ್ನು ಸಾಕಲು ಎಲ್ಲರೂ ಬಯಸುತ್ತಾರೆ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೆಕ್ಕುಗಳು ದೊರೆಯುತ್ತವೆ. ಆದರೆ ಶಕುನದ ಬಗ್ಗೆ ಬಂದಾಗ ಬೆಕ್ಕನ್ನು ದ್ವೇಷಿಸುವವರೆ ಹೆಚ್ಚು. ಅತಿ ಚುರುಕಾದ ಪ್ರಾಣಿಗಳಲ್ಲಿ ಬೆಕ್ಕು ಸಹ ಒಂದು. ಪ್ರಾಣಿಗಳು ನಮ್ಮ ಮೇಲೆ ಅವಲಂಬಿತವಾಗುವುದಿಲ್ಲ. ಆದರೆ ನಾವು ಪ್ರಾಣಿಗಳ ಮೇಲೆ ಪೂರ್ಣವಾಗಿ ಅವಲಂಬಿತರಾಗುತ್ತೇವೆ. ಆದ್ದರಿಂದ ಪ್ರಾಣಿಗಳನ್ನು ಅಪಶಕುನ ಸೂಚಕ ಎಂದು ಭಾವಿಸುವುದೇ ತಪ್ಪು. ಇದನ್ನು ಕೇವಲ ನಂಬಿಕೆ ಎನ್ನಬಹುದು. ಕೆಲವೊಮ್ಮೆ ಇದು ಕೇವಲ ಅನುಭವದ ಮಾತಾಗುತ್ತದೆ.

ಯಾವುದೇ ಪ್ರಾಣಿಯನ್ನು ಸಾಕಲು ನಿರ್ಧರಿಸಿ ಆಯ್ಕೆ ಮಾಡಿದಾಗ ಆ ಪ್ರಾಣಿಯ ವರ್ತನೆಯನ್ನು ಗಮನಿಸಿ ಅರ್ಥ ಮಾಡಿಕೊಳ್ಳುವುದು ಅತ್ಯಗತ್ಯ. ಆ ಪ್ರಾಣಿಗಳು ನಿಮ್ಮನ್ನು ನೋಡಿ ಪ್ರೀತಿಯಿಂದ ವರ್ತಿಸಿದಲ್ಲಿ ಅದು ಶುಭಸೂಚನೆಯಾಗುತ್ತದೆ. ಜನ್ಮಕುಂಡಲಿಯಲ್ಲಿ ಬೆಕ್ಕನ್ನು ಚಂದ್ರ ಮತ್ತು ಶುಕ್ರನಿಂದ ಕಾಣಬಹುದು. ಚಂದ್ರನು ಮನಸ್ಸನ್ನು ಸೂಚಿಸುತ್ತಾನೆ. ಆದ್ದರಿಂದ ಜನ್ಮಕುಂಡಲಿಯಲ್ಲಿ ಚಂದ್ರನು ವೃಷಭ ರಾಶಿಯಲ್ಲಿ ಇದ್ದಲ್ಲಿ ...