Bangalore, ಮೇ 17 -- ಬೆಂಗಳೂರು: ಬೆಂಗಳೂರಿಗೆ ಹೊಂದಿಕೊಡಂತೆ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಕಲ್ಪತರು ನಾಡು ತುಮಕೂರು ಕೂಡ ಒಂದು. ಈ ನಗರದೊಂದಿಗೆ ನಿತ್ಯ ಜನ ಬೆಂಗಳೂರಿಗೆ ಬಂದು ಹೋಗುತ್ತಾರೆ. ಸದ್ಯ ಈ ಮಾರ್ಗದಲ್ಲಿ ಬಸ್, ರೈಲು ಸೇವೆ ಇದೆ. ಇದರೊಟ್ಟಿಗೆ ನಮ್ಮ ಮೆಟ್ರೋವನ್ನು ತುಮಕೂರು ನಗರಕ್ಕೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಸೂಚನೆಯಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(BMRCL) ಕಾರ್ಯಸಾಧ್ಯತಾ ಕರಡು ವರದಿಯನ್ನು ಸಿದ್ದಪಡಿಸಿದೆ. ಈಗಾಗಲೇ ಕರ್ನಾಟಕ ಸರ್ಕಾರಕ್ಕೂ ಈ ಸಂಬಂಧ ವರದಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಸಲ್ಲಿಸಿದೆ. ಭವಿಷ್ಯದ ನಗರಗಳ ಬೆಳವಣಿಗೆ, ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಈ ಯೋಜನೆ ರೂಪಿಸುವ ಕುರಿತು ಕರಡು ವರದಿಯಲ್ಲಿ ನಿಗಮವು ಉಲ್ಲೇಖ ಮಾಡಿದೆ.
ಅದರಲ್ಲೂ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ತುಮಕೂರಿಗೆ ವಿಸ್ತರಿಸಲು ಪ್ರಸ್ತಾಪಿಸಿದೆ. ಈ ಯೋಜನೆ ಜಾರಿಯಾದರೆ ಕರ್ನಾಟಕದ ಮೊದಲ ಅಂತರ-ನಗರ ಮೆಟ್ರೋ ಎನ್ನಿಸಲಿದೆ. 25 ಎತ್ತರದ ನಿಲ್ದಾಣಗಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.