Holalkere, ಏಪ್ರಿಲ್ 19 -- ಚಿತ್ರದುರ್ಗ: ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು ಮಾರ್ಗವಾಗಿ ಹೊಸಪೇಟೆಗೆ ಹೋಗುವ ಕೆಎಸ್‌ಆರ್ ಬೆಂಗಳೂರು - ಹೊಸಪೇಟೆ ಪ್ಯಾಸೆಂಜರ್ ರೈಲು ಇನ್ನು ಮುಂದೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಹಾಗೂ ಅಮೃತಾಪುರ ನಿಲ್ದಾಣಗಳಲ್ಲೂ ತಾತ್ಕಾಲಿಕ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣಿಕರ ಅನುಕೂಲತೆಗೆ ನೈಋತ್ಯ ರೈಲ್ವೆಯು ರೈಲು ಸಂಖ್ಯೆ 56519/56520 ಕೆಎಸ್‌ಆರ್ ಬೆಂಗಳೂರು - ಹೊಸಪೇಟೆ ಪ್ಯಾಸೆಂಜರ್ ದೈನಂದಿನ ರೈಲಿಗೆ 2025ರ ಏಪ್ರಿಲ್ 18 ರಿಂದ ಜುಲೈ 17 ರ ವರೆಗೆ ಹೊಳಲ್ಕೆರೆ ಮತ್ತು ಅಮೃತಾಪುರ ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ ಲಭ್ಯವಿದೆ. ಸಾರ್ವಜನಿಕರ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಚಿತ್ರದುರ್ಗ ಭಾಗದ ಪ್ರಯಾಣಿಕರ ಅನುಕೂಲತೆ ಮತ್ತು ಸಂಪರ್ಕವನ್ನು ಸುಧಾರಿಸಲು ಸಹಾಯವಾಗಲಿದೆ.

ಬೆಂಗಳೂರು ಹಾಗೂ ಹುಬ್ಬಳ್ಳಿ ಹಾಗೂ ಚಿತ್ರದುರ್ಗ ಕಡೆಗೆ ಸಂಚರಿಸುವ ಹಲವು ರೈಲುಗಳನ್ನು ಹೊಳಲ್ಕೆರೆಯಲ್ಲಿ ನಿಲ್ಲಿಸಬೇಕು ಎ...