Bangalore, ಮೇ 15 -- ಬೆಂಗಳೂರು: ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದ ಹಾಸನ ಮತ್ತು ಮಾವಿನಕೆರೆ ನಡುವೆ ಟ್ರ್ಯಾಕ್ ನವೀಕರಣ ಕಾಮಗಾರಿ ನಡೆಯುವುದರಿಂದ ಕೆಲವು ರೈಲುಗಳ ಸೇವೆಯನ್ನು 25 ದಿನಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ.ತಾಳಗುಪ್ಪ - ಮೈಸೂರು ಎಕ್ಸ್‌ಪ್ರೆಸ್, ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಹಾಗೂ ಕೆಎಸ್‌ಆರ್ ಬೆಂಗಳೂರು - ಹಾಸನ ಡೆಮು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯವಾಗಲಿದೆ. ಮೇ 16ರಿಂದ ಆರಂಭಗೊಂಡು ಸುಮಾರು 25 ದಿನಗಳ ಕಾಲ ಸಂಚಾರ ಸಮಯದಲ್ಲಿ ವ್ಯತ್ಯಯವಾಗಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಮೈಸೂರು ರೈಲ್ವೆ ವಿಭಾಗದ ಹಿರಿಯ ವಾಣಿಜ್ಯ ವ್ಯವಸ್ಥಾಪಕ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್‌ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

1. ರೈಲು ಸಂಖ್ಯೆ 16221 ತಾಳಗುಪ್ಪ - ಮೈಸೂರು ಎಕ್ಸ್‌ಪ್ರೆಸ್, ಮೇ 16ರಿಂದ 20, ಮೇ 23ರಿಂದ 27, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನ...