ಭಾರತ, ಫೆಬ್ರವರಿ 4 -- Ratha Saptami Weather: ವಾಡಿಕೆಯಂತೆ ಹೇಳುವುದಾದರೆ ರಥ ಸಪ್ತಮಿ ಬಂತೆಂದರೆ ಚಳಿ ಕಡಿಮೆಯಾದಂತೆ. ಅದೇ ರೀತಿ, ಶಿವರಾತ್ರಿ ಬಂದರೆ ಚಳಿ ಮುಗಿದು ಬೇಸಿಗೆ ಶುರು. ಇಂದು (ಫೆ.4) ರಥ ಸಪ್ತಮಿ. ಶಿವರಾತ್ರಿಗೆ ಇನ್ನು ಮೂರು ವಾರ ಇದೆ. ಅಂದರೆ, ಚಳಿಗಾಲ ಇನ್ನು ಮುಗಿಯಲು ಮೂರು ವಾರಗಳು ಇದೆ. ಆಗಲೇ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಯ ಅನುಭವವಾಗತೊಡಗಿದೆ. ಸದ್ಯ, ಸಂಜೆ 6ರ ನಂತರ ಹಾಗೂ ಬೆಳಗ್ಗೆ 8 ಗಂಟೆವರೆಗೆ ಅಲ್ಪ ಪ್ರಮಾಣದಲ್ಲಿ ಚಳಿ ಅನುಭವಕ್ಕೆ ಬಂದರೂ, ಬೇಸಿಗೆ ಬಿಸಿಲಿನ ತಾಪಮಾನದ ಅನುಭವ ನಿಧಾನವಾಗಿ ಆಗತೊಡಗಿದೆ. ಕರ್ನಾಟಕದ ಉದ್ದಗಲಕ್ಕೂ ಒಣಹವೆ ಇದ್ದು, ಚಳಿ ಕಡಿಮೆಯಾಗತೊಡಗಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಕಾರಣ ತಾಪಮಾನ ಹೆಚ್ಚಳಕ್ಕೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ಹಿಂದಿನ ಲೆಕ್ಕಾಚಾರದ ಪ್ರಕಾರ, ಬ್ರವರಿ ಮಾತ್ರವಲ್ಲದೆ, ಮಾರ್ಚ್ ತಿಂಗಳಲ್ಲೂ ಚಳಿಯ ವಾತಾವರಣ ಇರಲಿದೆ ಎಂದು ಹವಾಮಾನ ಇ...