ಭಾರತ, ಮಾರ್ಚ್ 24 -- Cauvery aarti at Sankey Tank: ಕರ್ನಾಟಕ ಸರ್ಕಾರ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಪ್ರಸಿದ್ಧ ಸ್ಯಾಂಕಿ ಕೆರೆಯಲ್ಲಿ ಮಾರ್ಚ್ 21 ರಂದು ಕಾವೇರಿ ಆರತಿ ಕಾರ್ಯಕ್ರಮ ಆಯೋಜಿಸಿತ್ತು. ಇದು ಬಹಳ ಅಪರೂಪದ, ಅದ್ಭುತ ಕಾರ್ಯಕ್ರಮವಾಗಿತ್ತು. ಆದರೆ ಈ ಕಾರ್ಯಕ್ರಮದಿಂದ 5 ಟನ್‌ನಷ್ಟು ತ್ಯಾಜ್ಯ ಉ‌ತ್ಪತ್ತಿಯಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಸ್ಕೃತಿಕ ಮತ್ತು ಧಾರ್ಮಿಕ ಕೊಡುಗೆಯಾಗಿ ಆಯೋಜಿಸಲಾದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಹೂವಿನ ಅಲಂಕಾರದ ತ್ಯಾಜ್ಯಗಳು, ಫುಡ್‌ ಕವರ್‌ಗಳು, ಬ್ಯಾನರ್‌ಗಳು ಮತ್ತು ಇತರ ತ್ಯಜಿಸಲಾದ ವಸ್ತುಗಳ ರಾಶಿಗಳು ಉಳಿದಿತ್ತು ಎಂದು ದಿ ಹಿಂದೂ ವರದಿ ಉಲ್ಲೇಖಿಸಿದೆ.

ಪೌರಕಾರ್ಮಿಕರು ಮತ್ತು ತ್ಯಾಜ್ಯ ಸಂಗ್ರಹಕಾರರು ಕೂಡಲೇ ಸ್ವಚ್ಛತಾ ಕಾರ್ಯ ಕೈಗೊಂಡ ಹಿನ್ನೆಲೆ ಕಸವನ್ನು ಪರಿಣಾಮಕಾರಿಯಾಗಿ ತೆರವುಗೊಳಿಸಲಾಯಿತು ಮತ್ತು ಇದರಿಂದಾಗಿ ಯಾವುದೇ ರೀತಿ ದೀರ್ಘಕಾಲೀನ ಪರಿಸರ ಹಾನಿ ಉಂಟಾಗುವುದನ್ನು ತಡೆಗಟ್ಟಲು ಸಾಧ್ಯವಾಗಿದೆ ಎಂದು ವ...