Bengaluru, ಮಾರ್ಚ್ 18 -- ಬೆಂಗಳೂರಿನ ಜೆಪಿ ನಗರದಲ್ಲಿರುವ ಶುಭ ಕನ್ವೆನ್ಶನ್ ಸೆಂಟರ್‌ನಲ್ಲಿಬೆಂಗಳೂರು ಸೀರೆ ಉತ್ಸವ 2025 ನಡೆಯುತ್ತಿದ್ದು, ಮಾರ್ಚ್ 20ಕ್ಕೆ ಕೊನೆಗೊಳ್ಳಲಿದೆ. ಈ ಉತ್ಸವವು ಭಾರತದ ಶ್ರೀಮಂತ ಕೈಮಗ್ಗ ಪರಂಪರೆಯನ್ನು ಸಂರಕ್ಷಿಸಲು ಮತ್ತು ಕುಶಲಕರ್ಮಿಗಳು ತಮ್ಮ ಕರಕುಶಲತೆಯ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ನೀಡಿದೆ.

ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಒಕ್ಕೂಟ ಲಿಮಿಟೆಡ್‌ನ ಅಧ್ಯಕ್ಷ ಬಿ.ಜೆ. ಗಣೇಶ್ ಬೆಂಗಳೂರು ಸೀರೆ ಉತ್ಸವಕ್ಕೆ ಮಾರ್ಚ್ 14 ರಂದು ಚಾಲನೆ ನೀಡಿದರು. ನವದೆಹಲಿಯ ರಾಷ್ಟ್ರೀಯ ವಿನ್ಯಾಸ ಕೇಂದ್ರ (ಎನ್‌ಡಿಸಿ) ಮತ್ತು ಜವಳಿ ಸಚಿವಾಲಯದ (ಕೈಮಗ್ಗಗಳು) ಸಹಯೋಗದಲ್ಲಿ ಈ ಉತ್ಸವ ನಡೆಯುತ್ತಿದೆ.

ಬೆಂಗಳೂರು ಸೀರೆ ಉತ್ಸವ 2025 ಮಾರ್ಚ್ 14ಕ್ಕೆ ಶುರುವಾಗಿದ್ದು, ಮಾರ್ಚ್ 20, 2025 ರ ವರೆಗೆ ನಡೆಯಲಿದೆ. ಜೆಪಿ ನಗರದ ಶುಭ್ ಕನ್ವೆನ್ಷನ್ ಸೆಂಟರ್‌ನಲ್ಲಿ ಪ್ರತಿದಿನ ಬೆಳಿಗ್ಗೆ 11:00ರಿಂದ ರಾತ್ರಿ 8:00 ಗಂಟೆಯವರೆಗೆ ಕೈಮಗ್ಗ ಸೀರೆಗಳ ಪ್ರದರ್ಶನ ಮಾರಾಟ ನಡೆಯುತ್ತಿದೆ.

"ಕೈಮಗ್ಗ ನೇಯ್ಗೆ ...