ಭಾರತ, ಮಾರ್ಚ್ 7 -- ಬೆಂಗಳೂರು: ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಬೆಂಗಳೂರಿನ ಸಮೀಪದಲ್ಲೇ ನಿರ್ಮಾಣವಾಗಲಿದ್ದು, ಇದಕ್ಕೆ ಸೂಕ್ತ ಎನ್ನಿಸುವ 3 ಜಾಗಗಳನ್ನು ಗುರುತಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆಯನ್ನು ಕಳುಹಿಸಿದೆ ಕರ್ನಾಟಕ ಸರ್ಕಾರ.

ಈ ಪ್ರಸ್ತಾವನೆಯ ಪ್ರಕಾರ ಎರಡು ಸ್ಥಳಗಳು ಬೆಂಗಳೂರಿನ ದಕ್ಷಿಣ ಭಾಗದ ಕನಕಪುರ ರಸ್ತೆಯಲ್ಲಿದೆ. ಇದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ದಿಕ್ಕಿನಲ್ಲಿದೆ. ಈ ಎರಡು ಸ್ಥಳಗಳಲ್ಲಿ ಒಂದು ಬೆಂಗಳೂರು ನಗರ ವ್ಯಾಪ್ತಿಗೆ ಸೇರಿದರೆ ಇನ್ನೊಂದು ಜಾಗ ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಬರುತ್ತದೆ. ಹಾರೋಹಳ್ಳಿ ಬಳಿ ಗುರುತಿಸಲಾದ ಸ್ಥಳಗಳಲ್ಲಿ ಒಂದು ಹಸಿರು ಮಾರ್ಗದ ಕೊನೆಯ ಮೆಟ್ರೊ ನಿಲ್ದಾಣಕ್ಕಿಂತ 10 ಕಿಮಿ ಅಂತರದಲ್ಲಿದೆ ಎಂದು ಡೆಕ್ಕನ್‌ ಹೆರಾಲ್ಡ್ ವರದಿ ತಿಳಿಸಿದೆ.

ಕನಕಪುರ ರಸ್ತೆಯಲ್ಲಿ ಗುರುತಿಸಲಾದ ಎರಡು ಸ್ಥಳಗಳು ಕ್ರಮವಾಗಿ 4,800 ಮತ್ತು 5,000 ಎಕರೆ ಭೂಮಿಯ ವಿಸ್ತೀರ್ಣವನ್ನು ಹೊಂದಿವೆ. ಮೂರನೇ ಸ್ಥಳವು ನೆಲಮಂಗಲದ ಕುಣಿಗಲ್ ರಸ್ತೆ...