Bangalore, ಮೇ 8 -- ಬೆಂಗಳೂರು: ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳಲ್ಲಿ ಎರಡು ಹೊಸ ಟೋಲ್‌ಗಳು ಮೇ 9 ರ ಶುಕ್ರವಾರದಿಂದ ಆರಂಭವಾಗಲಿವೆ. ಈಗಾಗಲೇ ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಟೋಲ್‌ಗಳಿವೆ. ಬೆಂಗಳೂರು ಮೈಸೂರು, ಬೆಂಗಳೂರು ಪುಣೆ, ದೇವನಹಳ್ಳಿ, ಹೊಸಕೋಟೆ ಸಹಿತ ಹಲವು ಭಾಗಗಳಲ್ಲಿ ಟೋಲ್‌ಗಳ ಮೂಲಕ ರಾಷ್ಟ್ರೀ ಹೆದ್ಧಾರಿ ಪ್ರಾಧಿಕಾರವು ವಾಹನಗಳ ಸಂಚಾರಕ್ಕೆ ಶುಲ್ಕ ಸಂಗ್ರಹಿಸುತ್ತಿದೆ. ಈಗ ಬೆಂಗಳೂರು ಸಂಪರ್ಕ ಇರುವ ಎರಡು ಹೆದ್ದಾರಿಗಳಲ್ಲಿ ಟೋಲ್ ವ್ಯವಸ್ಥೆ ಮಾಡಲಾಗಿದೆ.ಬೆಂಗಳೂರಿನಿಂದ ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ 948ರ ದಕ್ಷಿಣ ಬೆಂಗಳೂರು ಜಿಲ್ಲೆಯ ಕನಕಪುರ ತಾಲ್ಲೂಕಿನ ಸೋಮನಹಳ್ಳಿ ಗ್ರಾಮ ಹಾಗೂ ಚಾಮರಾಜನಗರ ಜಿಲ್ಲೆಯ ಅಟ್ಟುಗೂಳಿಪುರ ಗ್ರಾಮದ ಬಳಿ ಟೋಲ್‌ಗೇಟ್‌ಗಳಲ್ಲಿ ಸೇವೆ ಶುರುವಾಗಲಿದೆ. ಈ ರಸ್ತೆಯಲ್ಲಿ ಹಣ ಪಾವತಿ ಮಾಡಿ ಸಂಚರಿಸುವ ವ್ಯವಸ್ಥೆ ಶುರುವಾಗಲಿದ್ದು, ವಾಹನಗಳಿಗೆ ದರ ನಿಗದಿ ಮಾಡಲಾಗಿದೆ.
Published by HT Digital Content Services ...
Click here to read full article from source
To read the full article or to get the complete feed from this publication, please
Contact Us.