ಭಾರತ, ಮೇ 31 -- ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಸಾರ್ವಜನಿಕರ ಅನುಕೂಲಕ್ಕಾಗಿ "ಬೆಂಗಳೂರು-ಶ್ರೀರಂಗಪಟ್ಟಣ-ಕಲ್ಲಹಳ್ಳಿ-ಮೇಲುಕೋಟೆ" ಮಾರ್ಗದಲ್ಲಿ ವಾರಾಂತ್ಯದಲ್ಲಿ ಶನಿವಾರ ಮತ್ತು ಭಾನುವಾರದಂದು ಪ್ಯಾಕೇಜ್ ಟೂರ್‌ ಆಯೋಜಿಸಲು ತೀರ್ಮಾನಿಸಿದೆ. ಇದು ಇಂದು (ಮೇ 31) ಶುರುವಾಗಿದೆ.

ಪ್ಯಾಕೇಜ್ ಟೂರ್‌ ಶುಲ್ಕದಲ್ಲಿ ಬೆಳಿಗ್ಗಿನ ಉಪಹಾರ, ಮಧ್ಯಾಹ್ನದ /ರಾತ್ರಿ ಊಟ ಹಾಗೂ ಪ್ರವೇಶ ಶುಲ್ಕಗಳನ್ನು ಹೊರತುಪಡಿಸಿ ವಯಸ್ಕ ಪ್ರಯಾಣಿಕರಿಗೆ ಕರ್ನಾಟಕ ಸಾರಿಗೆ ಪ್ರಯಾಣದರ ಮುಂಗಡ ಬುಕಿಂಗ್ ಸೇರಿ670 ರೂಪಾಯಿ, 6 ರಿಂದ 12 ವರ್ಷದ ಮಕ್ಕಳಿಗೆ 500 ರೂಪಾಯಿ ನಿಗದಿಪಡಿಸಲಾಗಿದೆ.

ಕೆಎಸ್‍ಆರ್‌ಟಿಸಿ ಬಸ್ ಬೆಂಗಳೂರಿನಿಂದ ಬೆಳಿಗ್ಗೆ 6.30 ಗಂಟೆಗೆ ನಿರ್ಗಮಿಸಿ 8.30 ಗಂಟೆಗೆ ನಿಮಿಷಾಂಬ ದೇವಸ್ಥಾನ ತಲುಪುವುದು. ನಿಮಿಷಾಂಬ ದೇವಸ್ಥಾನ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಅದಾಗಿ ಉಪಹಾರ ಮುಗಿಸಿ ನಿಮಿಷಾಂಬದಿಂದ ಶ್ರೀರಂಗಪಟ್ಟಣಕ್ಕೆ ಪ್ರಯಾಣ ಇರಲಿದೆ. ಶ್ರೀರಂಗನಾಥ (ಆದಿರಂಗ) ದೇವಸ್ಥಾನ ವೀಕ್ಷಣೆಯ ನಂತರ ಅ...