ಭಾರತ, ಏಪ್ರಿಲ್ 16 -- ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನ ಟರ್ಮಿನಲ್‌ 2ರ ಮುಂಭಾಗದಲ್ಲಿ ಕಲಾಸಕ್ತರು ಮತ್ತು ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಆರ್ಟ್‌ ಪಾರ್ಕ್‌ ಉಪಕ್ರಮ ಕಲಾಪ್ರೇಮಿಗಳ ಮನಸೂರೆಗೊಂಡಿತು. ಪ್ರಸಿದ್ಧ ಕಲಾವಿದ ಎಸ್‌.ಜಿ. ವಾಸುದೇವ್‌ ಅವರ ತಂಡದ ಕಲಾವಿದರು ತೆರೆದ ಆವರಣದಲ್ಲಿ ಪ್ರದರ್ಶಿಸಿದ ಕಲಾ ಪ್ರದರ್ಶನವನ್ನು ಪ್ರಯಾಣಿಕರು, ಸ್ಥಳೀಯ ನಿವಾಸಿಗಳು, ಸಿಬ್ಬಂದಿಗಳು ಕಣ್ತುಂಬಿಕೊಂಡರು.

"ಆರ್ಟ್ ಪಾರ್ಕ್ ಎಂಬುದು ಸುದೀರ್ಘ ಕಾಲದಿಂದ ಆಯೋಜಿಸುತ್ತಿರುವ ಉಪಕ್ರಮವಾಗಿದ್ದು, ಬೆಂಗಳೂರು ನಗರದಾದ್ಯಂತ 75 ಕ್ಕೂ ಹೆಚ್ಚು ಆವೃತ್ತಿಗಳನ್ನು ನಡೆಸುವ ಮೂಲಕ ಕಲಾವಿದರು ಮತ್ತು ಸಮುದಾಯಗಳನ್ನು ಒಟ್ಟುಗೂಡಿಸಿದೆ. ಅನೌಪಚಾರಿಕ, ಅಂತರ್ಗತ ವಾತಾವರಣಕ್ಕೆ ಹೆಸರುವಾಸಿಯಾದ ಈ ವೇದಿಕೆಯು ಸಮಕಾಲೀನ ಕಲೆಯನ್ನು ಪ್ರೋತ್ಸಾಹಿಸುತ್ತದೆ" ಎಂದು ಪ್ರಸಿದ್ಧ ಕಲಾವಿದ ಎಸ್.ಜಿ ವಾಸುದೇವ್ ಹೇಳಿದರು.

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟ್ ಪಾರ್ಕ್‌ನ್ನು ಪ್ರಯಾಣಿಕರು, ಸ...