Bengaluru, ಮಾರ್ಚ್ 27 -- Bengaluru Airport Road Toll Hike: ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಪ್ರಯಾಣ ಏಪ್ರಿಲ್ 1 ರಿಂದ ತುಸು ದುಬಾರಿಯಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವಾಗ ಅಥವಾ ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್‌ನಲ್ಲಿ ಸಂಚರಿಸಿದರೆ ಪ್ರಯಾಣ ದುಬಾರಿಯಾಗಲಿದೆ. ವಾರ್ಷಿಕವಾಗಿ ನಡೆಯುವ ಶುಲ್ಕ ಪರಿಷ್ಕರಣೆಯು ರಸ್ತೆ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ. ಅದೇ ರೀತಿ ಸರಕು ಸಾಗಣೆಯ, ಸಾರ್ವಜನಿಕ ಸಾರಿಗೆ ಮುಂತಾದವುಗಳ ಮೇಲಿನ ಸುಂಕದ ಹೊರೆ ಅಂತಿಮವಾಗಿ ಜನರ ಮೇಲೆಯೇ ಬೀಳಲಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರಗಳನ್ನು ಪರಿಷ್ಕರಿಸಿದ್ದು ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಎಂದು ಘೋಷಿಸಿದೆ. ಈ ದರ ಪರಿಷ್ಕರಣೆಯು ಎನ್‌ಎಚ್‌ 7ರ ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್ ಪ್ಲಾಜಾ, ರಾಷ್ಟ್ರೀಯ ಹೆದ್ದಾರಿ 648ರ ಹುಲಿಕುಂಟೆ, ನಲ್ಲೂರು ದೇವನಹಳ್ಳಿ ಟೋಲ್‌ ಪ್ಲಾಜಾಗಳಿಗೂ ಅನ್ವಯವಾಗಲಿದೆ ಎಂದು ಡೆಕ್ಕನ್ ಹೆರಾಲ್ಡ್ ತಿಳಿಸಿದೆ.

ಸಾದಹಳ್ಳಿ ...