ಭಾರತ, ಮಾರ್ಚ್ 29 -- ಬೆಂಗಳೂರು: ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಎನ್ನಿಸಿಕೊಂಡಿರುವ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ ಫ್ಲೈಯಿಂಗ್ ಸ್ಪೇಸ್ ವಾಯೇಜ್ ಅನುಭವ ನೀಡುವ ಮಿಷನ್ ಇಂಟರ್ ಸ್ಟೆಲ್ಲಾರ್ ಅನ್ನು ಬೆಂಗಳೂರಿನ ವಂಡರ್ ಲಾದಲ್ಲಿ ಪರಿಚಯಿಸಿದೆ. ನಕ್ಷತ್ರಗಳಾಚೆಗೆ ಸಂದರ್ಶಕರನ್ನು ಕರೆದೊಯ್ಯಲು ವಿನ್ಯಾಸಗೊಳಿಸಲಾದ ಅತ್ಯಾಧುನಿಕ ಆಕರ್ಷಣೆ ಇದಾಗಿದೆ. ಇದು ಭಾರತದ ಅತಿದೊಡ್ಡ ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಥಿಯೇಟರ್ ಆಗಿದ್ದು, ಮನೋರಂಜನೆ ಮತ್ತು ವಿರಾಮವನ್ನು ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ನಿಖರತೆ, ಗುಣಮಟ್ಟ ಮತ್ತು ವಿಶ್ವ ದರ್ಜೆಯ ಸುರಕ್ಷತಾ ಮಾನದಂಡಗಳನ್ನು ಖಚಿತಪಡಿಸಿಕೊಳ್ಳಲು ವಂಡರ್ ಲಾದ ಆಂತರಿಕ ಎಂಜಿನಿಯರಿಂಗ್ ತಂಡವು ಇದಕ್ಕಾಗಿ ಸಾಕಷ್ಟು ಕೆಲಸ ಮಾಡಿದೆ. ‌

ಈ ಹೊಸ ಮೈಲಿಗಲ್ಲನ್ನು ಆಚರಿಸಲು ಬೆಂಗಳೂರು ವಂಡರ್‌ ಲಾ ವಿಶೇಷ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಜನಪ್ರಿಯ ನಟಿ ಆಶಿಕಾ ರಂಗನಾಥ್, ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಂಡಿ ಅರುಣ್ ಕೆ ಚಿಟ್ಟಿಲಪ್ಪಿಲ್ಲಿ,...