Banalore, ಮೇ 11 -- ಬೆಂಗಳೂರು: ಬೆಂಗಳೂರು ನಗರದಲ್ಲಿ ರೈಲ್ವೆ ಸಂಚಾರದ ದಟ್ಟಣೆ ಹೆಚ್ಚಾಗಿದ್ದು, ರೈಲುಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಪ್ರಯಾಣಿಕರ ಸಂಖ್ಯೆಯು ಹೆಚ್ಚಿದೆ.ಬೆಂಗಳೂರಿನಿಂದ ಉತ್ತರದ ಜತೆಗೆ ದಕ್ಷಿಣ ಭಾರತದ ಪ್ರಮುಖ ನಗರ, ಊರುಗಳಿಗೆ ರೈಲ್ವೆ ಸಂಪರ್ಕ ಇರುವುದು ದಟ್ಟಣೆ ಹೆಚ್ಚಲು ಪ್ರಮುಖ ಕಾರಣ. ಇದಕ್ಕಾಗಿಯೇ ದೇವನಹಳ್ಳಿ ನಿಲ್ದಾಣದ ಸಮೀಪ ಅಥವಾ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಯಾವುದೇ ಸೂಕ್ತ ಸ್ಥಳದಲ್ಲಿ ಮೆಗಾ ಕೋಚಿಂಗ್ ಟರ್ಮಿನಲ್ ನಿರ್ಮಾಣದ ಉದ್ದೇಶದಿಂದ ಅಂತಿಮ ಸ್ಥಳ ಸಮೀಕ್ಷೆ (FLS) ಪ್ರಾರಂಭಿಸಲು 1.35 ಕೋಟಿ ರೂ. ವೆಚ್ಚದ ಯೋಜನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ. ಮೆಗಾ ಕೋಚಿಂಗ್ ಟರ್ಮಿನಲ್ ಯೋಜನೆಯು ಬೆಂಗಳೂರಿನ ಗರಿಷ್ಠ ಮಟ್ಟದ ದಟ್ಟತೆಯನ್ನು ಹೊಂದಿರುವ ರೈಲು ಮೂಲಸೌಕರ್ಯಕ್ಕೆ ಪರಿಹಾರ ಒದಗಿಸಲು ಹಾಗೂ ವಿಸ್ತರಿಸುತ್ತಿರುವ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಲು ಉದ್ದೇಶಿತವಾಗಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ದೂರ ದೃಷ್ಟಿಯ ನಾಯಕತ್ವ ಹಾಗೂ ರೈಲ್ವೆ ರಾಜ್...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.