ಭಾರತ, ಮೇ 19 -- ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆಯ ಜಂಕ್ಷನ್‌ವರೆಗೆ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಹೀಗಾಗಿ ವಾಹನ ಸಂಚಾರ ಬಂದ್ ಮಾಡಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಪರದಾಟ ಮುಂದುವರಿದಿದೆ. ಶನಿವಾರ (ಮೇ 17) ರಾತ್ರಿ ಎರಡು ತಾಸಿಗೂ ಹೆಚ್ಚು ಕಾಲ ವಾಹನ ರೆಸಿಡೆನ್ಸಿ ರಸ್ತೆ ಮೇಲ್ಸೇತುವೆಯಲ್ಲಿ ಸಾಲುಗಟ್ಟಿ ನಿಂತವು. ಆಂಬುಲೆನ್ಸ್‌ಗಳೂ ದಟ್ಟಣೆಯಲ್ಲಿ ಸಿಲುಕಿದ್ದವು. ಭಾನುವಾರ (ಮೇ 19) ಕೂಡ ಇದೇ ವಾಹನ ದಟ್ಟಣೆ ಪರಿಸ್ಥಿತಿ ಇತ್ತು. ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆಯಾದರೂ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ದಟ್ಟಣೆ ಉಂಟಾಗಿದೆ.
ರೆಸಿಡೆನ್ಸಿ ರಸ್ತೆಯಲ್ಲಿ ಆಶೀರ್ವಾದಂ ಜಂಕ್ಷನ್ ನಿಂದ ಒಪೇರಾ ಜಂಕ್ಷನ್ ವರೆಗೆ ವೈಟ್ ಟ್ಯಾಪಿಂಗ್ ಮೇ 8 ರಂದು ಶುರುವಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ವಾಹನ ಸವಾರರ ಸುಗಮ ಸಂಚಾರದ ಹಿತ ದ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.