Bangalore, ಜನವರಿ 26 -- ಬೆಂಗಳೂರು: ಬೆಂಗಳೂರು ರಾಜಭವನವನ್ನು ನಾವು ಮುಖ್ಯಮಂತ್ರಿ ಇಲ್ಲವೇ ಸಚಿವರು ಪ್ರಮಾಣ ವಚನ ಸ್ವೀಕರಿಸುವಾಗ ನೋಡಿರಬಹುದು. ಇಲ್ಲದೇ ಶಾಸಕರು, ಮುಖಂಡರು ಮನವಿಗಳನ್ನು ಸಲ್ಲಿಸಲು ಹೋದಾಗ ರಾಜಭವನವನ್ನು ಫೋಟೋಗಳಲ್ಲಿ ವೀಕ್ಷಿಸಿರಬಹುದು. ಆದರೆ ನೇರವಾಗಿ ವೀಕ್ಷಣೆ ಮಾಡಲು ಸಾಮಾನ್ಯರಿಗೆ ಅವಕಾಶ ಬಹಳ ಕಡಿಮೆ. ಮೊದಲೇ ಅನುಮತಿ ಪಡೆದಿದ್ದರೆ ಅವಕಾಶ ಸಿಗಬಹುದು ಇಲ್ಲವೇ ಸಿಗದೇ ಇರಬಹುದು. ಆದರೆ ಈಗ ರಾಜಭವನವನ್ನು ವೀಕ್ಷಿಸಲು ರಾಜ್ಯಪಾಲರ ಕಚೇರಿಯೇ ಅನುಮತಿ ನೀಡಿದೆ. ಅದೂ 76ನೇ ಗಣರಾಜ್ಯೋತ್ಸವದ ನಿಮಿತ್ತ ದಿನಾಂಕ 26 ಮತ್ತು 27 ಜನವರಿ ರಂದು ರಾಜಭವನಕ್ಕೆ ಸಾರ್ವಜನಿಕರ ಪ್ರವೇಶವನ್ನು ಕಲ್ಪಿಸಲಾಗಿದೆ.

ಸಾರ್ವಜನಿಕರು ಮುಖ್ಯದ್ವಾರದ ಮೂಲಕ ಉಚಿತ ಪ್ರವೇಶ ಪಡೆಯಬಹುದಾಗಿದೆ. ರಾಜಭವನ ಪ್ರವೇಶ ಪಡೆಯಲಿಚ್ಚಿಸುವವರು ಆಧಾರ್ ಕಾರ್ಡ್ ಅಥವಾ ಭಾವಚಿತ್ರವಿರುವ ಅಧಿಕೃತ ಗುರುತಿನ ಚೀಟಿಯನ್ನು ಹಾಜರುಪಡಿಸತಕ್ಕದ್ದು. ಪ್ರವೇಶದ ಸಮಯ: ಸಂಜೆ 6 ರಿಂದ 7.30

ಸಾರ್ವಜನಿಕರು ಯಾವುದೇ ರೀತಿಯ ಕ್ಯಾಮರಾ, ಕೈ ಚೀಲ, ಚೂಪಾದ ವಸ್ತುಗಳ...