ಭಾರತ, ಫೆಬ್ರವರಿ 4 -- ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್ ಅವರ ಕಾರಿಗೆ ಸರಕು ಸಾಗಣೆ ಆಟೊ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಲಘು ಅವಘಡ ಸಂಭವಿಸಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿದೆ. ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಘಟನೆ ನಡೆದಿದ್ದು, ಒಂದಕ್ಕೊಂದು ವಾಹನಗಳು ಟಚ್‌ ಆಗಿವೆ. ಯಾರಿಗೂ ಯಾವುದೇ ಅಪಾಯಗಳಾಗಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ.

ಲಘು ಅಪಘಾತದ ಬಳಿಕ ರಾಹುಲ್‌ ದ್ರಾವಿಡ್‌ ತಮ್ಮ ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸಿದ್ದಾರೆ. ಈ ನಡುವೆ ದ್ರಾವಿಡ್‌ ಮತ್ತು ಆಟೊ ಚಾಲಕನ ನಡುವೆ ವಾಗ್ವಾದವೂ ನಡೆದಿದೆ. ಇಬ್ಬರೂ ಕನ್ನಡ ಭಾಷೆಯಲ್ಲೇ ಮಾತನಾಡಿದ್ದಾರೆ. ಶಾಂತ ಹಾಗೂ ತಾಳ್ಮೆಯ ಸ್ವಭಾವಕ್ಕೆ ಹೆಸರಾಗಿರುವ ದ್ರಾವಿಡ್, ತಮ್ಮ ಕಾರಿಗೆ ಸ್ವಲ್ಪ ಹಾನಿಯಾಗಿದ್ದನ್ನು ಸಹಿಸಿಕೊಂಡಿಲ್ಲ. ಹೀಗಾಗಿ ಸರಕು ಸಾಗಣೆ ಆಟೊ ಚಾಲಕನ ತಪ್ಪು ಇರುವ ಬಗ್ಗೆ ವಾ...