ಭಾರತ, ಏಪ್ರಿಲ್ 28 -- ಬೆಂಗಳೂರು-ಮೈಸೂರು ಹೆದ್ದಾರಿ ಆರಂಭವಾಗುವ ಮೊದಲು ಈ ಮಾರ್ಗ ಸಾಕಷ್ಟು ಪ್ರಶಂಸೆಗೆ ಒಳಗಾಗಿತ್ತು. ಈ ಮಾರ್ಗವು ಸಂಚಾರದ ದಿಕ್ಕನ್ನೇ ಬದಲಿಸಲಿದೆ ಎನ್ನುವ ಮಾತು ಕೇಳಿಬರುತ್ತಿತ್ತು. ಆದರೆ ಈ ಹೆದ್ದಾರಿ ಸಂಚಾರ ಮುಕ್ತವಾದ ಮೇಲೆ ಪರಿಸ್ಥಿತಿ ಬದಲಾಗಿದೆ. ಅಲ್ಲದೇ ಇದರ ಮೇಲೆ ಇರಿಸಿಕೊಂಡಿದ್ದ ಸಾಕಷ್ಟು ನಂಬಿಕೆಗಳು ಹುಸಿಯಾಗಿವೆ. ಈ ಮಾರ್ಗವು ಪ್ರಯಾಣಿಕರಿಗೆ ನಿರಾಸೆ ಉಂಟು ಮಾಡಿದೆ.

ಇತ್ತೀಚೆಗಂತೂ ಈ ಮಾರ್ಗದ ಟೋಲ್ ಫ್ಲಾಜಾಗಳ ಬಳಿ ಟ್ರಾಫಿಕ್ ಸಿಕ್ಕಾಪಟ್ಟೆ ಉಂಟಾಗುತ್ತಿದ್ದು ಇದರಿಂದ ಪ್ರಯಾಣಿಕರು ಹೈರಾಣಾಗಿದ್ದಾರೆ. ಹಬ್ಬದ ದಿನಗಳು, ಲಾಂಗ್ ವೀಕೆಂಡ್ ಬಂತು ಎಂದರೆ ಶೇಷಗಿರಿ ಹಳ್ಳಿ ಮತ್ತು ಕಣಿಮಿಣಿಕೆ ಟೋಲ್ ಪ್ಲಾಜಾಗಳ ಬಳಿ ಗಂಟೆಗಟ್ಟಲೆ ಪ್ರಯಾಣಿಕರು ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಏಪ್ರಿಲ್ 20ರ ಭಾನುವಾರ ಈ ಟೋಲ್‌ಗೇಟ್‌ಗಳ ಬಳಿ ಸುಮಾರು 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಹಲವು ವಾಹನಗಳು ಕಿಲೋಮೀಟರ್‌ಗಟ್ಟಲೆ ಉದ್ದಕ್ಕೆ ಕ್ಯೂ ನಿಂತಿದ್ದವು. ವಾರಾಂತ್ಯದ ದಟ್ಟಣೆಯನ್ನು ನಿ...