ಭಾರತ, ಏಪ್ರಿಲ್ 9 -- ಬೆಂಗಳೂರು: ಹಲವಾರು ಪ್ರಯಾಣಿಕರು ತಮ್ಮ ಮೆಟ್ರೋ ಪ್ರಯಾಣಕ್ಕಾಗಿ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಮತ್ತು ಕಾರ್ಡ್ ಬಳಕೆಯ ಸಂದರ್ಭದಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುವುದು ಕಂಡು ಬಂದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ( ಬಿಎಂಆರ್‌ಸಿಎಲ್ ) ಮೆಟ್ರೋ ನಿಲ್ದಾಣಗಳಲ್ಲಿ ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳನ್ನು (National Common Mobility Cards) ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ , NCMC ಕಾರ್ಡ್‌ಗಳ ಪೂರೈಕೆದಾರರಾದ RBL ಬ್ಯಾಂಕ್ ತನ್ನ ಮಾರಾಟಗಾರರನ್ನು ಬದಲಾಯಿಸಿದ ನಂತರ ಬ್ಯಾಕೆಂಡ್ ವ್ಯವಸ್ಥೆಯ ಪರಿವರ್ತನೆಯಿಂದ ಈ ಅಡಚಣೆ ಉಂಟಾಗಿದೆ. ಈ ಬದಲಾವಣೆಯು ತಾಂತ್ರಿಕ ದೋಷಗಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ. ಇದು ಕಾರ್ಡ್ ರೀಚಾರ್ಜ್‌ ಮಾಡುವ ಸಂದರ್ಭ ಹಾಗೂ ಬಳಕೆ ಮಾಡುವ ಸಮಯದಲ್ಲಿ ಪರಿಣಾಮ ಬೀರಿದೆ.

ಈ ಸಮಸ್ಯೆಯನ್ನು ಪರಿಹರಿಸಲು, ಬಿಎಂಆರ್‌ಸಿಎಲ್‌ನಿಂದ ಸಮಸ್ಯೆಗೊಳಗಾದ ಪ್ರಯಾಣಿಕರಿಗೆ ಸಂಪರ್ಕರಹಿತ ನಮ್ಮ ಮೆಟ...