ಭಾರತ, ಫೆಬ್ರವರಿ 10 -- Bengaluru Metro: ಬೆಂಗಳೂರು ನಗರ ಸಾರಿಗೆ ಪ್ರಮುಖ ಕೊಂಡಿಯಾಗಿರುವ ನಮ್ಮ ಮೆಟ್ರೋ ಟಿಕೆಟ್ ದರ ಪರಿಷ್ಕರಣೆಯಾಗಿದ್ದು ಗರಿಷ್ಠ ಟಿಕೆಟ್ ದರ 90 ರೂಪಾಯಿ ಆಗಿದೆ. ಇದರೊಂದಿಗೆ ಬೆಂಗಳೂರು ಮೆಟ್ರೋ ಭಾರತದ ಮೆಟ್ರೋ ಸಾರಿಗೆ ಪೈಕಿ ಅತ್ಯಂತ ದುಬಾರಿ ಮೆಟ್ರೋ ಸೇವೆಯಾಗಿ ಪರಿಗಣಿಸಲ್ಪಟ್ಟಿದೆ. ಬೆಂಗಳೂರು ಮೆಟ್ರೋದ ಗರಿಷ್ಠ ಟಿಕೆಟ್ ದರ 60 ರೂಪಾಯಿಯಿಂದ 90 ರೂಪಾಯಿಗೆ ಏರಿಕೆ ಫೆ 9 ರಂದು ಜಾರಿಗೆ ಬಂದಿದೆ. ಇನ್ನೊಂದೆಡೆ, ಕೋಲ್ಕತ ಮೆಟ್ರೋ ಭಾರತದಲ್ಲಿ ಅತ್ಯಂತ ಕಡಿಮೆ ಟಿಕೆಟ್ ದರ ಹೊಂದಿದ ಮೆಟ್ರೋ ಎಂಬ ಕೀರ್ತಿಗೆ ಭಾಜನವಾಗಿದೆ. ಕೋಲ್ಕತ್ತ ಮೆಟ್ರೋದ ಕನಿಷ್ಠ ಟಿಕೆಟ್ ದರ 5 ರೂಪಾಯಿ ಮತ್ತು ಗರಿಷ್ಠ ಟಿಕೆಟ್ ದರ 50 ರೂಪಾಯಿ.

ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಬಳಿಕ ಜನಾಕ್ರೋಶ ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ಬೆಂಗಳೂರು ಮೆಟ್ರೋದಲ್ಲಿ ಈಗ 25 ಕಿಮೀಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ 90 ರೂಪಾಯಿ ಪಾವತಿಸಬೇಕು. ದೆಹಲಿ ಮೆಟ್ರೋದಲ್ಲಿ 32ಕ್ಕೂ ಹೆಚ್ಚು ...