ಭಾರತ, ಮಾರ್ಚ್ 2 -- ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಯಾದ ಮೇಲೆ, ಪ್ರಯಾಣಿಕರ ಆಕ್ರೋಶ ಮುಂದುವರೆದಿದೆ. ಅಲ್ಲದೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಜನರು ಖಾಸಗಿ ವಾಹನಗಳನ್ನು ನೆಚ್ಚಿಕೊಳ್ಳುತ್ತಿದ್ದಾರೆ. ಜೊತೆಗೆ ಬಿಎಂಟಿಸಿ ಪ್ರಯಾಣ ತುಸು ಅಗ್ಗವಾಗಿರುವುದರಿಂದ, ಬಸ್‌ ಮೇಲಿನ ಅವಲಂಬನೆ ಹೆಚ್ಚಿರುವ ಬಗ್ಗೆ ಬರದಿಯಾಗಿದೆ. ಈ ನಡುವೆ, ಮೆಟ್ರೋ ಮತ್ತು ಆಟೋ ದರಗಳ ಹೋಲಿಕೆಯ ಪೋಸ್ಟ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಉದ್ಯಾನ ನಗರಿಯಲ್ಲಿ ಸಮೂಹ ಸಾರಿಗೆ ದುಬಾರಿಯಾಗಿರುವ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ.

ಮಲ್ಲೇಶ್ವರದಿಂದ ಯಲಚೇನಹಳ್ಳಿಗೆ ಮೆಟ್ರೋ ಮೂಲಕ ಪ್ರಯಾಣಿಸಲು ಮೂವರಿಗೆ 180 ರೂ. ಬೇಕಾಗುತ್ತದೆ. ಇದೇ ವೇಳೆ ಆಟೋದಲ್ಲಿ ಪ್ರಯಾಣಿಸಲು 210 ರೂ. ಸಾಕು. ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಲಾಗಿದೆ. ಈ ಪೋಸ್ಟ್‌ಗೆ ಭಾರಿ ಪ್ರತಿಕ್ರಿಯೆಗಳು ಬಂದಿವೆ. ಬಳಕೆದಾರರ ನಡುವೆ ಪ್ರತಿ ಸಾರಿಗೆ ವಿಧಾನದ ಪ್ರಾಯೋಗಿಕತೆ ಮತ್ತು ವೆಚ್ಚದಲ್ಲಿನ ವ್ಯತ್ಯಾಸದ ಬಗ್ಗೆ ಚರ್ಚೆ ಶುರುವಾಗಿದೆ.

ಪ್...