ಭಾರತ, ಫೆಬ್ರವರಿ 11 -- Bengaluru Metro Price Hike: ಬೆಂಗಳೂರು ಮೆಟ್ರೋ ಟಿಕೆಟ್ ದರ ಸದ್ಯ ಹಾಟ್ ಟಾಪಿಕ್‌. ಬಡ ಮಧ್ಯಮ ವರ್ಗದ ಜನರಿಗೆ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ನುಂಗಲಾಗದ ಬಿಸಿತುಪ್ಪವಾಗಿದೆ. ಟ್ಯಾಕ್ಸಿ ದರಕ್ಕೆ ಸನಿಹ ತಲುಪಿರುವ ಮೆಟ್ರೋ ದರದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಈ ನಡುವೆ, ಕರ್ನಾಟಕ ಸರ್ಕಾರದ ಬಗ್ಗೆ ಟೀಕೆಗಳು ಕೇಳಿ ಬಂದ ಕಾರಣ, ರಾಜಕೀಯ ವಾಕ್ಸಮರಕ್ಕೂ ಈ ದರ ಏರಿಕೆ ಕಾರಣವಾಗಿದೆ. ಬೆಂಗಳೂರು ಮೆಟ್ರೋ ಟಿಕೆಟ್ ದರ ಏರಿಕೆ ಆದ ಕೂಡಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಬಡ - ಮಧ್ಯಮ ವರ್ಗಕ್ಕೆ ಇದು ಹೊರೆ ಎಂದು ಹೇಳಿದ್ದರು. ಇದೇ ವಿಚಾರವನ್ನು ತೇಜಸ್ವಿ ಸೂರ್ಯ ಅವರು ಒಂದು ಸಂಸತ್‌ನಲ್ಲೂ ಪ್ರಸ್ತಾಪಿಸಿದ್ದು, ಮಧ್ಯಮ ವರ್ಗದ ಸಂಕಷ್ಟಗಳ ಕಡೆಗೆ ಗಮನಸೆಳೆದರು.

ಸಂಸದ ತೇಜಸ್ವಿ ಸೂರ್ಯ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಸಂಸತ್‌ನ ಶೂನ್ಯವೇಳೆಯಲ್ಲಿ ತಾನು ಮಾತನಾಡಿದ್ದೇನು ಎಂಬುದನ್ನು ವಿವರಿಸಿದ್ದಾರೆ. "ಸಂಸತ್‌ ಅಧಿವೇಶನದಲ್ಲಿ ಶೂನ್ಯ ವೇಳೆಯಲ...