ಭಾರತ, ಮಾರ್ಚ್ 17 -- Bengaluru Metro Jobs: ಬೆಂಗಳೂರು ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ತಾನು ಇತ್ತೀಚೆಗೆ ಪ್ರಕಟಿಸಿದ್ದ ಬೆಂಗಳೂರು ಮೆಟ್ರೋ ಟ್ರೇನ್ ಆಪರೇಟರ್ ಹುದ್ದೆಗಳ ನೇಮಕ ಅಧಿಸೂಚನೆಯನ್ನು ಹಿಂಪಡೆದಿದೆ. ಇದಕ್ಕೆ ಸಂಬಂಧಿಸಿದ ಪ್ರಕಟಣೆಯಲ್ಲಿ ಬಿಎಂಆರ್‌ಸಿಎಲ್ ತಾನು ನಮ್ಮ ಮೆಟ್ರೋ ಟ್ರೇನ್ ಆಪರೇಟರ್ ಹುದ್ದೆಗಳ ನೇಮಕದ ಅಧಿಸೂಚನೆ ಹಿಂಪಡೆಯುತ್ತಿರುವುದಕ್ಕೆ ಯಾವುದೇ ಕಾರಣ ನೀಡಿಲ್ಲ.

ಬೆಂಗಳೂರು ಮೆಟ್ರೋ ಟ್ರೇನ್ ಆಪರೇಟರ್ ಹುದ್ದೆಗಳ ನೇಮಕ ಆದೇಶ ಹಿಂಪಡೆದ ಬಿಎಂಆರ್‌ಸಿಎಲ್ ಪ್ರಕಟಣೆಯನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

"ನಮ್ಮ ಮೆಟ್ರೋ ನಮ್ಮ ಜನ ಎಂಬ ಸಾಲುಗಳೊಂದಿಗೆ ಟ್ವೀಟ್ ಆರಂಭವಾಗಿದೆ. ಕನಿಷ್ಠ 3 ವರ್ಷಗಳ ಅನುಭವದ ಅಗತ್ಯವಿರುವ ಟ್ರೇನ್ ಆಪರೇಟರ್‌ಗಳ (ಲೊಕೊ ಪೈಲಟ್‌ಗಳು) ಇತ್ತೀಚಿನ ಬಿಎಂಆರ್‌ಸಿಎಲ್ ನೇಮಕಾತಿಯ ಆದೇಶವನ್ನು ಹಿಂಪಡೆಯಲಾಗಿದೆ. ಒಪ್ಪಂದದ ಆಧಾರದ ಮೇಲೆ ಟ್ರೇನ್ ಆಪರೇಟರ್‌ಗಳ (...