ಭಾರತ, ಏಪ್ರಿಲ್ 13 -- ದೀರ್ಘಕಾಲದಿಂದ ವಿಳಂಬವಾಗಿದ್ದ ಬೆಂಗಳೂರಿನ ನಮ್ಮ ಮೆಟ್ರೋದ ಹಳದಿ ಮಾರ್ಗವು ಜೂನ್ 2025 ರ ವೇಳೆಗೆ ಭಾಗಶಃ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರ ಪ್ರಕಾರ, ಕಾರಿಡಾರ್‌ನಲ್ಲಿ ಪೂರ್ಣ ಪ್ರಮಾಣದ ಸೇವೆಗಳು ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಪ್ರಾರಂಭವಾಗಬಹುದು. CMRS ಅನುಮೋದನೆ ದೊರೆತ ನಂತರ ಮತ್ತು ನಮಗೆ ಅಗತ್ಯವಿರುವ ರೈಲು ಸೆಟ್‌ಗಳು ದೊರೆತ ನಂತರ ಕಾರ್ಯಾಚರಣೆಗಳು ಪ್ರಾರಂಭವಾಗುತ್ತವೆ ಎಂದು ಅವರು ಹೇಳಿದ್ಧಾರೆ.

ಮೂರನೇ ರೈಲಿಗಾಗಿ ಕಾಯುತ್ತಿದ್ದೇವೆ. ಈ ತಿಂಗಳ ಅಂತ್ಯದ ವೇಳೆಗೆ ಹೆಚ್ಚಿನ ಸ್ಪಷ್ಟತೆ ಸಿಗಲಿದೆ ಎಂದು ಅವರು ಹೇಳಿದ್ದಾರೆ. ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಚಲಿಸುವ 19.15 ಕಿಮೀ ಹಳದಿ ಮಾರ್ಗದ ಕೆಲಸಗಳು ಹಲವಾರು ತಿಂಗಳುಗಳ ಹಿಂದೆಯೇ ಪೂರ್ಣಗೊಂಡಿವೆ. ಚೀನಾದಿಂದ ಖರೀದಿಸಲಾಗುತ್ತಿರುವ ಚಾಲಕರಹಿತ ರೈಲು ಸೆಟ್‌ಗಳ ಆಗಮನದಲ್ಲಿನ ವಿಳಂಬವು ಉದ್ಘಾಟನಾ ಸಮಯವನ್...