ಭಾರತ, ಮಾರ್ಚ್ 14 -- ಬೆಂಗಳೂರು ಸೇರಿ ಎಲ್ಲಕಡೆಯೂ ಈಗ ಮದುವೆ ಸೇರಿ ವಿವಿಧ ಶುಭಕಾರ್ಯಗಳು ನಡೆಯುತ್ತಿವೆ. ಹೂವಿನ ಮಾರುಕಟ್ಟೆಗೂ ಇದು ಹೆಚ್ಚು ವಹಿವಾಟು ನಡೆಯುವ ಸಮಯ. ಇದೇ ವೇಳೆ, ಹೂವುಗಳ ವಿಶೇಷವಾಗಿ ಮಲ್ಲಿಗೆ ತಾಜಾತನ ಉಳಿಸುವುದಕ್ಕಾಗಿ ಕೃತಕ ಬಣ್ಣ, ರಾಸಾಯನಿಕಗಳನ್ನು ಬಳಸುತ್ತಿರುವ ಶಂಕೆ ವ್ಯಕ್ತವಾಗಿದೆ.

ಆರೋಗ್ಯಕ್ಕೆ ಹಾನಿ ಉಂಟುಮಾಡುವ ಕೃತಕ ಬಣ್ಣಗಳನ್ನು ಆಹಾರದ ಬಳಕೆ ಮಾಡುವುದನ್ನು ಪತ್ತೆ ಹಚ್ಚಿ ಅಂತಹ ಕ್ರಮಗಳನ್ನು ಸರ್ಕಾರ ನಿಷೇಧಿಸಿದೆ. ಗೋಭಿ ಮಂಚೂರಿ ಸೇರಿದಂತೆ ಇತರೆ ಆಹಾರ ಬಳಕೆಯಲ್ಲಿ ಕೃತಕ ಬಣ್ಣ ಬಳಸದಂತೆ ನಿರ್ಬಂಧಿಸಿದೆ. ಈ ನಡುವೆ, ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಹಾಳೆ ಬಳಕೆ ಮಾಡುತ್ತಿರುವುದು ಕೂಡ ಗಮನಸೆಳೆದಿತ್ತು. ಅದರ ವಿರುದ್ಧವೂ ಸರ್ಕಾರ ಕ್ರಮ ಜರುಗಿಸಿದೆ. ಇಂತಹ ಸನ್ನಿವೇಶದಲ್ಲಿ ಮಲ್ಲಿಗೆಯ ತಾಜಾತನ ಉಳಿಸುವುದಕ್ಕೆ ಕೃತಕ ಬಣ್ಣ, ರಾಸಾಯನಿಕ ಬಳಸುತ್ತಿರುವ ಆರೋಪ ವ್ಯಕ್ತವಾಗಿದೆ ಎಂದು ಸಂಯುಕ್ತ ಕರ್ನಾಟಕ ಶುಕ್ರವಾರ (ಮಾರ್ಚ್ 14) ವರದಿ ಮಾಡಿದೆ.

ಮಲ್ಲಿಗೆ ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಬ...