Mangalore, ಏಪ್ರಿಲ್ 17 -- ಮಂಗಳೂರು: ವಕ್ಫ್‌ ಕಾಯಿದೆ ತಿದ್ದುಪಡಿಗೆ ಅಲ್ಲಲ್ಲಿ ವಿರೋಧ ವ್ಯಕ್ತವಾಗುತಿದ್ದು, ಅಲ್ಲಲ್ಲಿ ಪ್ರತಿಭಟನೆಗಳು ನಡೆದಿವೆ. ಈಗ ಕರ್ನಾಟಕದ ಕರಾವಳಿ ಭಾಗದಲ್ಲೂ ಹೋರಾಟಗಳು ಚುರುಕುಗೊಳ್ಳುತ್ತಿವೆ. ವಿಶೇಷವಾಗಿ ಮಂಗಳೂರಿನಲ್ಲಿ ಭಾರೀ ಹೋರಾಟವನ್ನೇ ರೂಪಿಸಲಾಗಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಮಂಗಳೂರು ಹೊರವಲಯದ ಅಡ್ಯಾರ್ ಸಮೀಪ ಷಾ ಗಾರ್ಡನ್ ಮೈದಾನದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಪ್ರತಿಭಟನೆ ಏಪ್ರಿಲ್ 18ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಶುಕ್ರವಾರದಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಸ್ಥಳೀಯ, ತುರ್ತು ಹಾಗೂ ಅತ್ಯಗತ್ಯ ಕಾರಣಗಳಿಗೆ ಬರುವ ವಾಹನಗಳನ್ನು ಹೊರತು ಪಡಿಸಿ ವಾಹನ ಸಂಚಾರ ನಿರ್ಬಂಧಿಸಿ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಆದೇಶ ಮಾಡಿದ್ದಾರೆ. ವಿವರ ಹೀಗಿದೆ.

2025 ಏಪ್ರಿಲ್ 18 ರಂದು ಮಂಗಳೂರು ನಗರದ ಅಡ್ಯಾರ್ ಕಣ್ಣೂರು ಬಳಿ ಇರುವ ಷಾ ಗಾರ್ಡನ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಶವು ನಡೆಯಲಿದೆ. ಅಡ್ಯಾ...