ಭಾರತ, ಮಾರ್ಚ್ 23 -- Bengaluru Rain Havoc: ಸುಡು ಬಿಸಿಲು, ಬೇಸಿಗೆಯ ಬೇಗೆಗೆ ದಣಿದಿದ್ದ ಬೆಂಗಳೂರು ಜನರಿಗೆ ಶನಿವಾರ ಸುರಿದ ಬೇಸಿಗೆ ಮಳೆ ಖುಷಿ ನೀಡಿತಾದರೂ, ಮಳೆಯ ನಂತರದ ಸಂಚಾರ ದಟ್ಟಣೆ, ಅವಾಂತರಗಳು ಕಂಗೆಡುವಂತೆ ಮಾಡಿದೆ. ಶನಿವಾರ (ಮಾರ್ಚ್ 22) ಸಂಜೆ ಮಳೆ ಸುರಿದಿದ್ದು, ವಿವಿಧೆಡೆ ಸಂಚಾರ ಅಸ್ತವ್ಯಸ್ತವಾಯಿತು. ಪುಲಕೇಶಿನಗರದಲ್ಲಿ ಮರ ಬಿದ್ದು ಬೈಕ್‌ನಲ್ಲಿ ಸಂಚರಿಸುತ್ತಿದ್ದ 3 ವರ್ಷದ ಪುಟಾಣಿ ಬಾಲಕಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬೆಂಗಳೂರು ಪುಲಕೇಶಿನಗರದಲ್ಲಿ ಮರ ಬಿದ್ದು ದುರ್ಮರಣಕ್ಕೀಡಾದ 3 ವರ್ಷ ವಯಸ್ಸಿನ ಪುಟಾಣಿ ಬಾಲಕಿಯನ್ನು ರಕ್ಷಾ ಎಂದು ಗುರುತಿಸಲಾಗಿದೆ. ಈಕೆ ದೇವರ ಜೀವನಹಳ್ಳಿಯ ನಿವಾಸಿ. ತನ್ನ ತಂದೆಯ ಜತೆಗೆ ರಾತ್ರಿ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಪೂರ್ವ ಪಾರ್ಕ್ ಮುಖ್ಯರಸ್ತೆಯಲ್ಲಿ ಈ ದುರಂತ ನಡೆದಿದೆ. ಮರ ಬುಡಮೇಲಾದ ಕಾರಣ ರಸ್ತೆಗೆ ಬಿದ್ದಿತ್ತು. ಆ ಸಂದರ್ಭದಲ್ಲಿ ಭಾರಿ ಗಾಳಿ ಮಳೆ ಇತ್ತು. ಮರ ಬಿದ್ದಾಗ ಆ ರಸ್ತೆಯಲ್ಲಿ ಸಂಚರಿಸುತ್ತಿದ...