ಭಾರತ, ಜನವರಿ 29 -- ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಗೂ ಮುನ್ನ ಬೆಂಗಳೂರು ಬುಲ್ಸ್ ತಂಡವು ಹೊಸ ಮುಖ್ಯ ಕೋಚ್ ನೇಮಿಸಿದೆ. ತಂಡದೊಂದಿಗೆ ಇದುವರೆಗಿನ ಎಲ್ಲಾ 11 ಸೀಸನ್‌ಗಳಲ್ಲಿ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದ ರಣಧೀರ್ ಸಿಂಗ್ ಅವರನ್ನು ತಂಡ ರಿಲೀಸ್‌ ಮಾಡಿದೆ. ಬುಲ್ಸ್ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ಪಿಕೆಎಲ್ ಸೀಸನ್ 11ರಲ್ಲಿ ತೀರಾ ಕಳಪೆ ಪ್ರದರ್ಶನ ನೀಡಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಆಡಿದ 22 ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆದ್ದು, ಇದುವರೆಗಿನ ಕಳಪೆ ಸೀಸನ್ ಎದುರಿಸಿತು. ಸೀಸನ್‌ ಮುಕ್ತಾಯವಾದ ಬೆನ್ನಲ್ಲೇ ತಂಡದ ಕೋಚ್‌ ಅನ್ನು ಬದಲಿಸಲಾಗಿದೆ. ನೂತನ ಕೋಚ್‌ ಆಗಿ ಕನ್ನಡಿಗನನ್ನೇ ನೇಮಿಸಲಾಗಿದೆ.

ಬುಲ್ಸ್‌ ತಂಡಕ್ಕೆ ಹೊಸದಾಗಿ ಕೋಚ್‌ ಆಗಿ ಬಂದವರು ಕನ್ನಡಿಗ ಬಿ.ಸಿ. ರಮೇಶ್. ಈವರೆಗೆ ಬುಲ್ಸ್‌ ಕೋಚ್‌ ಆಗಿದ್ದ ರಣಧೀರ್, ತಂಡಕ್ಕೆ ಸತತ 11 ಸೀಸನ್‌ಗಳಿಗೆ ಕೋಚ್ ಆಗಿದ್ದರು. ಪಿಕೆಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ಒಂದೇ ತಂಡಕ್ಕೆ ಸೇವೆ ಸಲ್ಲಿಸಿದ ಕೋಚ್...