ಭಾರತ, ಏಪ್ರಿಲ್ 22 -- ಬೆಂಗಳೂರು ಬೀದಿ ಕಾಳಗ ಕೇಸ್: ಬೆಂಗಳೂರಿನ ಸಿವಿ ರಾಮನ್ ನಗರದ ಗೋಪಾಲನ್ ಗ್ರ್ಯಾಂಡ್ ಮಾಲ್ ಸಮೀಪ ಸೋಮವಾರ (ಏಪ್ರಿಲ್ 21) ಬೆಳಿಗ್ಗೆ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಮೇಲೆ ಬೈಕ್ ಸವಾರನೊಬ್ಬ ಹಲ್ಲೆ ನಡೆಸಿದ ಘಟನೆ ಸಂಚಲನ ಮೂಡಿಸಿತ್ತು. ಶೀಲಾದಿತ್ಯ ಬೋಸ್‌ ರಕ್ತ ಸೋರುತ್ತಿದ್ದ ಮುಖದಲ್ಲೇ ವಿಡಿಯೋ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಘಟನೆಯ ವಿವರ ನೀಡಿದ್ದರು. ಕನ್ನಡಿಗರು, ಕನ್ನಡ ಭಾಷೆ ಎಂದೆಲ್ಲ ದೂರಿದ್ದರು. ಆದರೆ, ಸೋಮವಾರ ಸಂಜೆ ವೇಳೆಗೆ ಬಹಿರಂಗವಾಗಿರುವ ಕೆಲವು ಸಿಸಿಟಿವಿ ವಿಡಿಯೋ ತುಣುಕುಗಳಲ್ಲಿ ಶೀಲಾದಿತ್ಯ ಬೋಸ್ ಆಕ್ರಮಣಕಾರಿಯಾಗಿ ವರ್ತಿಸಿ ಬೈಕ್ ಸವಾರನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಇದು ಬೆಂಗಳೂರು ಬೀದಿ ಕಾಳಗ ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ.

ಬೆಂಗಳೂರಲ್ಲಿ ಕನ್ನಡ ಭಾಷೆ ಮಾತನಾಡುವಂತೆ ಕನ್ನಡಿಗರು ಆಕ್ರಮಣಕಾರಿ ವರ್ತನೆ ತೋರುತ್ತಿದ್ದಾರೆ ಎಂದು ಬಿಂಬಿಸಿದ್ದ ವಾಯುಪಡೆ ಅಧಿಕಾರಿ ವಿಂಗ್ ಕಮಾಂಡರ್ ಶೀಲಾದಿತ್ಯ ಬೋಸ್ ಮತ್ತು ಅವರ ಪತ್ನಿ ಸ್ಕ್ವಾಡ್ರನ್ ಲೀಡರ್ ಮಧುಮಿತ...