ಭಾರತ, ಮೇ 6 -- ಬೆಂಗಳೂರು: ಸುವರ್ಣ ಸಂಭ್ರಮ ಆಚರಿಸಿದ ಕೆಲವೇ ವಾರಗಳಲ್ಲಿ ಬೆಂಗಳೂರಿನ ಐತಿಹಾಸಿಕ ಕಾವೇರಿ ಥಿಯೇಟರ್‌ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಕಾಲಾಂತರದ ಪ್ರಭಾವದ ನಡುವೆಯೂ ಸ್ಯಾಂಕಿ ರಸ್ತೆಯಲ್ಲಿ ಪ್ಯಾಲೇಸ್ ಗುಟ್ಟಹಳ್ಳಿ ಸಮೀಪದ ಹಳೆಯ ಚಿತ್ರ ಮಂದಿರ ಇದಾಗಿದ್ದು, ಮಲ್ಟಿಪ್ಲೆಕ್ಸ್‌ಗಳ ನಡುವೆ ಉಳಿದುಕೊಂಡ ಏಕ ಪರದೆಯ ಚಿತ್ರಮಂದಿರ ಎಂಬ ಕಾರಣಕ್ಕೆ ಆಕರ್ಷಣೆಗೆ ಪಾತ್ರವಾಗಿತ್ತು.

ಹಳೆಯ ಬೆಂಗಳೂರಿಗರು ಈ ಚಿತ್ರಮಂದಿರದಲ್ಲಿ ನೋಡದೇ ಇರುವ ಸಿನಿಮಾ ಇರಲಾರದು. ಸದಾ ಸಿನಿರಸಿಕರಿಂದ ತುಂಬಿಕೊಂಡಿರುತ್ತಿದ್ದ ಥಿಯೇಟರ್ ಈಗ ತನ್ನ ಕಾರ್ಯಾಚರಣೆ ನಿಲ್ಲಿಸಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿದೆ.

ಡಾ. ರಾಜ್‌ಕುಮಾರ್ ನಟನೆಯ 'ಬಂಗಾರದ ಪಂಜರ' ಸಿನಿಮಾ ಪ್ರದರ್ಶನದ ಮೂಲಕ 1974ರ ಜನವರಿ 11ರಂದು ಈ ಚಿತ್ರಮಂದಿರ ಆರಂಭವಾಗಿತ್ತು. ಈ ವರ್ಷ ಜನವರಿ 11ಕ್ಕೆ 50 ವರ್ಷ ಪೂರೈಸಿ, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆಯಲ್ಲಿತ್ತು. ಏಪ್ರಿಲ್ 20 ರಂದು ಎರಡು ಹಿಂದಿ ಚಲನಚಿತ್ರಗಳಾದ ಬಡೇ ಮಿಯಾನ್ ಚೋಟ...