Bengaluru, ಏಪ್ರಿಲ್ 15 -- ಬೆಂಗಳೂರು ನೀರಿನ ಅದಾಲತ್‌: ಬೆಂಗಳೂರು ಮಹಾನಗರದಲ್ಲಿ ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಲ್ಲಿ ಏಪ್ರಿಲ್ 17 ರಂದು ಬೆಳಿಗ್ಗೆ ನೀರಿನ ಅದಾಲತ್ ನಡೆಯಲಿದೆ. ವಿಶೇಷವಾಗಿ, ಬೆಂಗಳೂರು ಜಲ ಮಂಡಳಿಯ ವಾಯುವ್ಯ-2, ವಾಯುವ್ಯ-4, ಕೇಂದ್ರ 1-2, ಈಶಾನ್ಯ - 2, ಉತ್ತರ 1-2, ಉತ್ತರ 2-2, ದಕ್ಷಿಣ 1-2, ದಕ್ಷಿಣ 2-2, ನೈರುತ್ಯ -2, ನೈರುತ್ಯ -5, ಪೂರ್ವ 1-3 ಮತ್ತು ಪೂರ್ವ 2-3, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ನೀರಿನ ಅದಾಲತ್ ನಡೆಯಲಿದೆ. ಈ ವಿಭಾಗಳಲ್ಲಿ ಏಪ್ರಿಲ್ 17ರಂದು ಬೆಳಿಗ್ಗೆ 9.30 ಗಂಟೆಯಿಂದ 11.00 ಗಂಟೆಯವರೆಗೆ ನೀರಿನ ಅದಾಲತ್‍ ನಡೆಸಲಾಗುವುದು ಎಂದು ಬೆಂಗಳೂರು ಜಲ ಮಂಡಳಿ ಮೂಲಗಳು ತಿಳಿಸಿವೆ.

ನೀರಿನ ಅದಾಲತ್ ಸೇವಾಠಾಣೆಗಳು ಹೆಚ್.ಎಂ.ಟಿ ಪೀಣ್ಯ, ದಾಸರಹಳ್ಳಿ, ಪೀಣ್ಯ, ಲಿಂಗಧೀರನಹಳ್ಳಿ, ಅಂದರಹಳ್ಳ...