Bangalore, ಜೂನ್ 4 -- ಬೆಂಗಳೂರು: ನಾಳೆ ಗುರುವಾರ (ದಿ 05.06.2025)ದಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 66ಕೆ.ವಿ ಬಾಣಸವಾಡಿ ಹೆಚ್.ಬಿ.ಆರ್ ಲೈನ್ ಮತ್ತು 66ಕೆ.ವಿ ಬಾಣಸವಾಡಿ-ಐಟಿಐ ಲೈನ್‌ ಗಳಲ್ಲಿ ತುರ್ತು ನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಕೆಳಗಿನ ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ಕೆಳಕಂಡ ಬಡಾವಣೆಗಳ ನಿವಾಸಿಗಳು ಸಹಕರಿಸಬೇಕು ಎಂದೂ ಕೋರಿದೆ. ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳ ವಿವರ ಹೀಗಿದೆ.

ಹೊರಮಾವು ಪಿ&ಟಿ ಲೇ ಔಟ್, ನಿಸರ್ಗ ಕಾಲೋನಿ, ನಂದನ ಕಾಲೋನಿ, ಆಶೀರ್ವಾದ್ ಕಾಲೋನಿ,ಜ್ಯೋತಿನಗರ, ಆಗರ, ಬಾಲಾಜಿ ಲೇಔಟ್, ಚಿನ್ನಸ್ವಾಮಪ್ಪ ಲೇಔಟ್, ಕೋಕೋನಟ್‌ ಗ್ರೋವ್, ದೇವಮಾತಾ ಶಾಲೆ, ಅಮರ್‌ ರೀಜೆನ್ಸಿ, ವಿಜಯ ಬ್ಯಾಂಕ್ ಕಾಲೋನಿ ಹೆಚ್.ಆರ್.ಬಿ.ಆರ್. ಲೇಔಟ್: 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, ಕಮ್ಮನಹಳ್ಳಿ ಮುಖ್ಯರಸ್ತೆ, ಕಲ್ಯಾಣನಗರ, ಬಿ.ಡಬ್ಲ್ಯೂ.ಎಸ್. ಎಸ್.ಬಿ ವಾಟರ್‌ ಟ್ಯಾಂಕ್, ಹೆಣ್ಣೂರು ಗ್ರಾಮ, ಚೆಳ್ಳಿಕೆರೆ, ಮೇಘನ ಪಾಳ್ಯ, ಗೆದ...