ಭಾರತ, ಏಪ್ರಿಲ್ 8 -- ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ ಎಂಬ ವಿಷಯ ಎಷ್ಟು ಸತ್ಯವೋ, ಮಹಿಳೆಯರಿಗೆ ಇನ್ನೂ ಅಭದ್ರತೆ ಕಾಡುತ್ತಿದೆ ಎಂಬ ಸತ್ಯವೂ ಅಷ್ಟೇ ನಿಜ. ಆತ್ಮರಕ್ಷಣೆ ಮತ್ತ ದೇಹರಕ್ಷಣೆಗೆ ಬೇಕಾದ ತಂತ್ರಗಳನ್ನು ಕಲಿತವರು ಕೆಲವರಾದರೆ ಅದನ್ನು ಕಲಿಯದೆಯೇ ತಮ್ಮ ಜೀವನದಲ್ಲಿ ಬಂದ ಕಷ್ಟಗಳನ್ನು ತಳ್ಳುತ್ತಿರುವವರು ಇನ್ನು ಕೆಲವರಿದ್ದಾರೆ. ಉದಾಹರಣೆಗೆ ಪ್ರತಿನಿತ್ಯ ಕೆಲಸಕ್ಕೆ ಹೋಗಿ ಬರುವ ಹಲವಾರು ಮಹಿಳೆಯರಿದ್ದಾರೆ. ಮಹಿಳೆಯರು ಸಮಾನರು ಎನ್ನುತ್ತಲೇ ಕಚೇರಿಗಳಲ್ಲಿ ಎಲ್ಲ ರೀತಿಯ ಶಿಫ್ಟ್‌ಗಳನ್ನು ನಿಭಾಯಿಸಬೇಕಾಗುತ್ತದೆ. ಮೆಟ್ರೋ, ಬಸ್‌, ಬಾಡಿಗೆ ವಾಹನಗಳು ಹೀಗೆ ಸಾಕಷ್ಟು ರೀತಿಯ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೂ ಇದೆ. ಆದರೆ, ಆ ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಗಮನಕ್ಕೆ ತೆಗೆದುಕೊಳ್ಳುವುದಾದರೆ ಅವರಿಗೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಅನುಭವಿಸಿದವರು ಹಲವರಿರುತ್ತಾರೆ. ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಮಹಿಳೆಯರ ಮೇ...