Bangalore, ಏಪ್ರಿಲ್ 25 -- ಬೆಂಗಳೂರು: ಬೆಂಗಳೂರು ನಗರದ ಎರಡು ಪ್ರಮುಖ ಸಂಸ್ಥೆಗಳ ಆಯುಕ್ತರ ಹುದ್ದೆ ಹೊಸ ಆಯುಕ್ತರು ಆಗಮಿಸುವ ಸಾಧ್ಯತೆಯಿದೆ. ಬೆಂಗಳೂರು ಬೃಹತ್‌ ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಹುದ್ದೆಗೆ ಹೊಸ ಆಯುಕ್ತರನ್ನು ನೇಮಿಸಲು ಸರ್ಕಾರ ಯೋಚಿಸುತ್ತಿದೆ. ಸದ್ಯ ಬಿಬಿಎಂಪಿ ಆಯುಕ್ತರಾಗಿ ತುಷಾರ್‌ ಗಿರಿನಾಥ್‌ ಅವರು ಕಾರ್ಯನಿರ್ವಹಿಸುತ್ತಿದ್ದು ಈಗಾಗಲೇ ಎರಡೂವರೆ ವರ್ಷದಿಂದ ಇರುವ ಅವರನ್ನು ಬದಲಿಸಬಹುದು. ಅದೇ ರೀತಿ ಎರಡು ವರ್ಷದಿಂದ ಬೆಂಗಳೂರು ನಗರ ಪೊಲೀಸ್‌ ಆಯುಕ್ತರಾಗಿರುವ ಬಿ.ದಯಾನಂದ ಅವರನ್ನು ಬದಲಿಸಿ ಇಲ್ಲಿಗೂ ಹೊಸ ಅಧಿಕಾರಿ ನಿಯೋಜಿಸಬಹುದು ಎನ್ನುವ ಚರ್ಚೆಗಳು ನಡೆದಿವೆ. ಈ ಮಾಸಾಂತ್ಯಕ್ಕೆ ಬದಲಾವಣೆ ಆಗುವ ಸಾಧ್ಯತೆಗಳಿದ್ದು, ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳು ವರ್ಗಾವಣೆ ಅಧಿಕೃತ ಆದೇಶಕ್ಕೆ ಕುತೂಹಲದಿಂದ ಕಾಯುತ್ತಿದ್ದಾರೆ.

Published by HT Digital Content Services with permission from HT Kannada....