ಭಾರತ, ಫೆಬ್ರವರಿ 18 -- Bangalore Weather: ಫೆಬ್ರವರಿ ಆರಂಭವಾಗುತ್ತಲೇ ಚಳಿ ದೂರವಾಗಿ ತಾಪಮಾನ ಹೆಚ್ಚಳವಾಗಿದೆ. ವಾಡಿಕೆಯಂತೆ ಆಗಿದ್ದರೆ ಶಿವರಾತ್ರಿ ತನಕವೂ ಚಳಿ ಇರಬೇಕು. ಆದರೆ ಈ ಬಾರಿ ಹಾಗಾಗಿಲ್ಲ. ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ಕನಿಷ್ಠ ತಾಪಮಾನ 16- 18 ಡಿಗ್ರಿ ಸೆಲ್ಶಿಯಸ್ ಇದ್ದರೆ, ಹಗಲು ಗರಿಷ್ಠ ತಾಪಮಾನ 30 ರಿಂದ 34 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿದೆ. ಆದ್ದರಿಂದ ಬೆಂಗಳೂರಿಗರಿಗೆ ಈಗಾಗಲೆ ಬಿಸಿಲಾಘಾತದ ಅನುಭವ ಆಗತೊಡಗಿದೆ. ತಾಪಮಾನ ಹೆಚ್ಚಳವಾದ ಬೆನ್ನಿಗೆ ತೇವಾಂಶ ಶೇಕಡ 30 -40ರ ಆಸುಪಾಸಿಗೆ ಇಳಿಕೆಯಾಗಿದೆ. ಇದು ಒಣಹವೆಯನ್ನು ಸೃಷ್ಟಿಸಿದೆ. ಹೀಗೆ, ಈ ಹವಾಮಾನ ವೈಪರೀತ್ಯದ ಅನುಭವ ಜನರನ್ನು ಹೈರಾಣಾಗುವಂತೆ ಮಾಡಿದೆ.

ಭಾರತೀಯ ಹವಾಮಾನ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಸದ್ಯದ (ಫೆ 18 ಸಂಜೆ 4 ಗಂಟೆ) ಮಾಹಿತಿ ಪ್ರಕಾರ, ಬೆಂಗಳೂರು ನಗರದ ಗರಿಷ್ಠ ತಾಪಮಾನ 31.8 ಡಿಗ್ರಿ ಸೆಲ್ಶಿಯಸ್, ತೇವಾಂಶ ಶೇಕಡ 29, ಪೂರ್ವದ ಗಾಳಿ ಗಂಟೆಗೆ 5.6 ಕಿಮೀ ವೇಗದಲ್ಲಿ ಬೀಸುತ್ತಿದೆ. ಬೆಂಗಳೂರ...