ಭಾರತ, ಮಾರ್ಚ್ 14 -- ಬೆಂಗಳೂರು: ಕಣ್ಣೂರು ಗ್ರಾಮಸ್ಥರ ಪ್ರತಿಭಟನೆ ಕಾರಣ ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ಕಾಂಪ್ಯಾಕ್ಟರ್‌ಗಳಲ್ಲಿರುವ ತ್ಯಾಜ್ಯ ವಿಲೇವಾರಿ ಆಗದೇ, ಬೆಂಗಳೂರು ಮಹಾ ನಗರದ ಹಲವೆಡೆ ಮನೆ, ರಸ್ತೆಗಳಲ್ಲಿ ಕಸ ಉಳಿದುಕೊಂಡಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ಮನೆ, ರಸ್ತೆಗಳಲ್ಲಿ ಕಸ ಉಳಿದುಕೊಂಡಿದ್ದು, ತ್ಯಾಜ್ಯ ವಿಲೇವಾರಿ ಸಂಕಷ್ಟ ತಲೆದೋರಿದೆ. ಇದು ಇನ್ನೂ 5 ಅಥವಾ 6 ದಿನ ಮುಂದುವರಿಯುವ ಸಾಧ್ಯತೆಗಳು ಗೋಚರಿಸಿದೆ.

1) ಬೆಂಗಳೂರು ನಗರ ತ್ಯಾಜ್ಯ ವಿಲೇವಾರಿ: ವಿವಿಧ ವಾರ್ಡುಗಳ ಬಡಾವಣೆಗಳಲ್ಲಿ ಕಸ ಸಂಗ್ರಹ ಕಾರ್ಯಕ್ಕೆ ಪೌರ ಕಾರ್ಮಿಕರನ್ನು ಬಿಬಿಎಂಪಿ ನೇಮಕ ಮಾಡಿದೆ. ಕೆಲವು ಬಡಾವಣೆಗಳಲ್ಲಿ ನಿತ್ಯ ಕಸ ಸಂಗ್ರಹವಾದರೆ ಇನ್ನು ಕೆಲವು ಬಡಾವಣೆಗಳಲ್ಲಿ ವಾರಕ್ಕೊಮ್ಮೆ, ಮೂರ್ನಾಲ್ಕು ದಿನಗಳಿಗೆ ಒಮ್ಮೆ ಕಸ ಸಂಗ್ರಹವಾಗುತ್ತಿದೆ. ಬಡಾವಣೆ ನಿವಾಸಿಗಳು ಪೌರಕಾರ್ಮಿಕರಿಗೆ ಹಣ ಕೊಡುವುದಿಲ್ಲ ಎಂಬ ಕಾರಣವೂ ಸೇರಿ ಇದಕ್ಕೆ ಕಾರಣಗಳು ಹಲವು.

2) ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶಕ್ಕೆ ಸಾಗಣೆ: ಬೆಂಗಳೂರು ಮಹಾನಗರ...