ಭಾರತ, ಮೇ 22 -- ಬೆಂಗಳೂರು: ಉಡುಪ ಪ್ರತಿಷ್ಠಾನದ ದಶಮಾನೋತ್ಸವ ಅಂಗವಾಗಿ ರಾಜಧಾನಿ ಬೆಂಗಳೂರಿನ ಸಂಗೀತ ಕಲಾ ರಸಿಕರಿಗೆ 'ಉಡುಪ ಸಂಗೀತೋತ್ಸವ' ಆರನೇ ಆವೃತ್ತಿ ಯು ಸಂಗೀತ ರಸದೌತಣವನ್ನು ನೀಡಲು ಅಣಿಯಾಗಿದೆ. ಮಹಾನಗರದ ಮಲ್ಲೇಶ್ವರದ ವಯ್ಯಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ. 22 ಮತ್ತು 23ರಂದು ಸಂಜೆ 7 ಕ್ಕೆ ಸಂಗೀತ ಸಮಾರಾಧನೆ ಸಂಪನ್ನಗೊಳ್ಳಲಿದೆ. ಈ ಬಾರಿಯೂ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರೊಳಗೊಂಡ ವಿಭಿನ್ನ ತಂಡವು ಸಂಗೀತ ಧಾರೆಯನ್ನು ಶ್ರೋತೃಗಳ ಮನ ಮಂದಿರಕ್ಕೆ ಎರೆಯಲು ಸಿದ್ಧತೆಗಳು ಪೂರ್ಣಗೊಂಡಿವೆ.
ಮೇ 22ರ ಸಂಜೆ 7ಕ್ಕೆ ತಾಳವಾದ್ಯ- ಕಛೇರಿ ಆಯೋಜನೆಗೊಂಡಿದೆ. ಪ್ರಖ್ಯಾತ ವಿದ್ವಾನ್ ಆನೂರು ಆರ್. ಅನಂತಕೃಷ್ಣ ಶರ್ಮ (ಶಿವು) ಅವರ ಮೃದಂಗ, ಪಂಡಿತ್ ಬಿಕ್ರಮ್ ಘೋಷ್ ಅವರ ತಬಲಾ ಮತ್ತು ವಿದ್ವಾನ್ ಸಿ. ಪಿ. ವ್ಯಾಸ ವಿಠ್ಠಲ ಅವರ ಖಂಜಿರಾ ವಾದನ ಅನುರಣಿಸಲಿದೆ. ನಂತರ ವಿಶ್ವಮಾನ್ಯ ಗಾಯಕ ಪಂಡಿತ್ ವೆಂಕಟೇಶ ಕುಮಾರ್ ಗಾಯನವಿದೆ. ಶ್ರೀ ವ್ಯಾಸಮೂರ್ತಿ ಕಟ್ಟಿ (ಹಾರ್ಮೋನಿಯಂ) ಮತ್ತು ಕೇಶವ ಜೋಶಿ ( ತಬಲಾ) ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.