ಭಾರತ, ಏಪ್ರಿಲ್ 8 -- ಬೆಂಗಳೂರು: ಭಾರತ ಮಾತ್ರವಲ್ಲದೆ ವಿಶ್ವದೆಲ್ಲೆ‌ಡೆ ಈಗ ಐಪಿಎಲ್‌ (IPL 2025) ಸಂಭ್ರಮ ಜೋರಾಗಿದೆ. ಕ್ರಿಕೆಟ್‌ ಅಭಿಮಾನಿಗಳು ನಿತ್ಯ ಐಪಿಎಲ್‌ ಪಂದ್ಯಗಳನ್ನು ಸವಿಯುತ್ತಿದ್ದಾರೆ. ಕೆಲವು ಅಭಿಮಾನಿಗಳು ಸ್ಟೇಡಿಯಂಗಳಿಗೆ ಹೋಗಿ ಪಂದ್ಯ ವೀಕ್ಷಿಸಿದರೆ, ಇನ್ನೂ ಕೆಲವರು ಮನೆಯಲ್ಲೇ ಪಂದ್ಯ ವೀಕ್ಷಿಸುತ್ತಾರೆ. ಸಾಮಾನ್ಯವಾಗಿ ಸ್ಟೇಡಿಯಂಗಳಲ್ಲಿ ಪಂದ್ಯ ವೀಕ್ಷಿಸುವಾಗ ನೆಟ್ವರ್ಕ್‌ ಸಮಸ್ಯೆ ಇದ್ದಿದ್ದೇ. ಸಾವಿರಾರು ಜನರು ಒಂದೆಡೆ ಸೇರುವಾಗ ಈ ಸಮಸ್ಯೆ ಆಗುತ್ತದೆ. ಆದರೆ, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ಮುಂದೆ ಇಂಥಾ ಸಮಸ್ಯೆಗಳು ಇರಲ್ಲ. ಅಭಿಮಾನಿಗಳು ಯಾವದೇ ಅಡೆತಡೆಯಿಲ್ಲದ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಗಳನ್ನು ಆನಂದಿಸಬಹುದು. ಇದಕ್ಕಾಗಿ ರಿಲಯನ್ಸ್ ಜಿಯೋ ಸೂಕ್ತ ವ್ಯವಸ್ಥೆ ಮಾಡಿದೆ.

ಬೆಂಗಳೂರಿನಲ್ಲಿ ಸುಮಾರು 50 ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುತ್ತಿರುವ ಚಿನ್ನಸ್ವಾಮಿ ಕ್ರೀಡಾಂಗಣವು, ಭಾರತದಲ್ಲಿ ಅತ್ಯಂತ ವ್ಯವಸ್ಥಿತ ಮೈದಾನವನ್ನು ಹೊಂದಿರುವ ಸ್ಟೇಡಿಯಂ ಎಂಬ ಹೆಗ್ಗಳ...