ಭಾರತ, ಮೇ 11 -- ಬೆಂಗಳೂರು: ಕಾರು ತಗುಲಿದ್ದಕ್ಕೆ ಉದ್ಯಮಿಯನ್ನು ಥಳಿಸಿ ಅವರ ಕಾರನ್ನೇ ತೆಗೆದುಕೊಂಡು ಹೋದ ಮಹಿಳೆಯ ವಿರುದ್ಧ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಉದ್ಯಮಿ ವಿನಯ್ ಗೌಡ ಅವರು ಮಹಿಳೆಯೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಮೇರೆಗೆ ದೀಪ್ತಿ ಕಟ್ರಗಡ್ಡ ಮತ್ತು ಅವರ ಸಹಚರರ ವಿರುದ್ಧ ಎಫ್‌ಐಆ‌ರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ತಮ್ಮ ಕಾರು, ಕಾರಿನಲ್ಲಿದ್ದ ದುಬಾರಿ ಬೆಲೆಯ ವಸ್ತುಗಳು ಹಾಗೂ ನಗದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ವಿನಯ್‌ ದೂರಿನಲ್ಲಿ ಆರೋಪಿಸಿದ್ದಾರೆ. ಲ್ಯಾವೆಲ್ಲೆ ರಸ್ತೆಯ ಪೂರ್ವ ಟ್ರ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ವಿನಯ್ ಅವರು ಮೇ 3ರಂದು ಮುಂಜಾನೆ ತಮ್ಮ ಪೊರ್ಶೆ ಕಾರನ್ನು ಅಪಾರ್ಟ್‌ ಮೆಂಟ್‌ನಿಂದ ಹೊರಗೆ ತೆಗೆಯುತ್ತಿದ್ದರು. ರಿವರ್ಸ್ ತೆಗೆಯುವ ಸಂದರ್ಭದಲ್ಲಿ ದೀಪ್ತಿ ಅವರ ಕಾರಿಗೆ ಟಚ್‌ ಆಗಿತ್ತು. ಆಗ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ದೀಪ್ತಿ ಕಡೆಯವರು ನನ್ನ ಮೇಲೆ ಹಲ್ಲೆ ನಡೆ...