ಭಾರತ, ಫೆಬ್ರವರಿ 28 -- BLR Cargo Terminal: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ವಿನ್ಯಾಸ ಸಾಮರ್ಥ್ಯದಲ್ಲಿ ಭಾರತದಲ್ಲೇ ಅತಿದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್‌ (ಡಿಸಿಟಿ) ಗುರುವಾರ (ಫೆ 27) ಕಾರ್ಯಾರಂಭ ಮಾಡಿದೆ. 120 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಟರ್ಮಿನಲ್ ನಿರ್ಮಿಸಲಾಗಿದೆ. ವಾರ್ಷಿಕ ಗರಿಷ್ಠ 360,000 ಮೆಟ್ರಿಕ್ ಟನ್ ನಿರ್ವಹಣಾ ಸಾಮರ್ಥ್ಯ ಹೊಂದಿರುವ 245,000 ಚದರ ಅಡಿ ವ್ಯಾಪ್ತಿಯ ಈ ಟರ್ಮನಿಲ್‌ ಅನ್ನು ಎಡಿನ್ಬರ್ಗ್ ಮೂಲದ ಮೆನ್ಜೀಸ್ ಏವಿಯೇಷನ್ ​​ಸಹಯೋಗದೊಂದಿಗೆ ನಿರ್ಮಿಸಲಾಗಿದೆ.

ಈ ಹೊಸ ಟರ್ಮಿನಲ್ ದೇಶೀಯ ವಾಯುಮಾರ್ಗ ಸರಕು ಸಾಗಣೆಯ ನಿರ್ವಹಣೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಂಚೂಣಿಯಲ್ಲಿರಿಸಲಿದೆ. ಕೈಗಾರಿಕೆಗಳ ಸಂಪರ್ಕ ಮತ್ತು ಪೂರೈಕೆ ಜಾಲವನ್ನು ಬಲಪಡಿಸುವಲ್ಲಿ ಹೊಸ ಕಾರ್ಗೋ ಟರ್ಮಿನಲ್‌ ಮಹತ್ವದ ಪಾತ್ರ ವಹಿಸಲಿದೆ. ಭಾರತದಲ್ಲಿ ಸರಕು ಸಾಗಣೆ ಮತ್ತು ಪ್ರಾದೇಶಿಕ ವ್ಯಾಪಾರದ ಭವಿಷ್ಯವನ್ನು ಈ ಟರ್ಮಿನಲ್‌ ಸುಸ್ಥಿರಗೊಳಿಸಲಿದೆ ...