Bengaluru, ಜುಲೈ 23 -- ಬೆಂಗಳೂರು: ಅನಿರೀಕ್ಷಿತ ವಿದ್ಯಮಾನ ಒಂದರಲ್ಲಿ, ಬೆಂಗಳೂರು ಕಲಾಸಿಪಾಳ್ಯ ಖಾಸಗಿ ಬಸ್‌ ನಿಲ್ದಾಣದಲ್ಲಿ ಸ್ಪೋಟಕ ಪತ್ತೆಯಾಗಿದೆ. ಬೆಂಗಳೂರು ನಗರ ಪೊಲೀಸರು ಹಾಗೂ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್‌) ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಸ್ಪೋಟಕ ವಶಪಡಿಸಿಕೊಂಡರು. ಅಲ್ಲದೇ, ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಕೈಗಾರಿಕಾ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಆರು ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಇವುಗಳನ್ನು ಬಹಳ ಜಾಣ್ಮೆಯಿಂದ ಪ್ಲಾಸ್ಟಿಕ್ ಚೀಲದೊಳಗೆ ಸುತ್ತಿಡಲಾಗಿತ್ತು ಎಂದು ವರದಿ ವಿವರಿಸಿದೆ. ಕಲಾಸಿಪಾಳ್ಯ ಬಿಎಂಟಿಸಿ ಬಸ್‌ ನಿಲ್ದಾಣಕ್ಕೆ ಸಮೀಪವಾಗಿ ಸಾರ್ವಜನಿಕ ಶೌಚಗೃಹದ ಬಳಿ ಈ ಚೀಲ ಪತ್ತೆಯಾಗಿತ್ತು. ಜಿಲೆಟಿನ್ ಕಡ್ಡಿಗಳ ಹೊರತಾಗಿ, ಡಿಟೋನೇಟರ್‌ಗಳನ್ನೂ ಪ್ರತ್ಯೇಕವಾಗಿ ಸುತ್ತಿಡಲಾಗಿತ್ತು. ಅವುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗಣಿಗಾರಿಕೆ ಹಾಗೂ ನಿರ್ಮಾಣ ಕಾಮಗಾರಿಗಳ ವೇಳೆ ಅಗ್ಗದ ಸ್ಫೋಟಕವಾಗಿ ಜಿಲೆಟಿನ್ ಕಡ್ಡಿಗಳು ಬಳಕೆಯಾಗುತ್...