ಭಾರತ, ಏಪ್ರಿಲ್ 5 -- ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ 2025 ಈಗಾಗಲೇ ಆರಂಭವಾಗಿದೆ. ಏಪ್ರಿಲ್ 4 ರಿಂದ 14ರ ವರೆಗೂ ಕರಗ ಉತ್ಸವದ ಆಚರಣೆಗಳು ನಡೆಯಲಿವೆ.

ಏಪ್ರಿಲ್ 4 ರಂದು ಶುಕ್ರವಾರ ರಾತ್ರಿ 10 ಗಂಟೆ ಹಾಗೂ ಮುಂಜಾನೆ 3 ಗಂಟೆಗೆ 'ರಥೋತ್ಸವ ಮತ್ತು ಧ್ವಜಾರೋಹಣ ಜರುಗಿದೆ.

ಏ. 5 ರಿಂದ 8 ರವರೆಗೆ(ಶನಿವಾರದಿಂದ ಮಂಗಳವಾರ) ರಾತ್ರಿ 7.30ಕ್ಕೆ ಪ್ರತಿದಿನ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿ ಜರುಗಲಿದೆ.

ಬಿಬಿಎಂಪಿ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಹಾಗೂ ಕರಗ ಸಮಿತಿಯ ಪದಾಧಿಕಾರಿಗಳು ಜನ ಸಂದಣಿಯನ್ನು ನಿಯಂತ್ರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.

ವಿಶ್ವ ವಿಖ್ಯಾತ ಬೆಂಗಳೂರು ಕರಗವು ದ್ರೌಪದಿ ತಾಯಿಯು ಆದಿಶಕ್ತಿ ಸ್ವರೂಪವಾಗಿದೆ.

ಸಂಚಾರ ಪೊಲೀಸ್ ವಿಭಾಗವು ಧರ್ಮರಾಯ ಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ದಟ್ಟಣೆಯಾಗದಂತೆ ಕ್ರಮ ವಹಿಸಿದೆ. ಸಾಕಷ್ಟು ಜನರು ಕರಗ ನೋಡಲು ಬರುತ್ತಾರೆ.

Published by HT Digital Content Services with permission from HT Kannada....