ಭಾರತ, ಏಪ್ರಿಲ್ 13 -- Bengaluru Karaga 2025: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶಕ್ತ್ಯೋತ್ಸವ ಶನಿವಾರ ತಡರಾತ್ರಿ ಸಂಪನ್ನವಾಗಿದ್ದು, ಭಾನುವಾರ ಬೆಳಿಗ್ಗೆ ತನಕವೂ ಕರಗದ ಮೆರವಣಿಗೆ ಸಾಗಿದ್ದು, ಸಾವಿರಾರು ವೀರ ಕುಮಾರರ ಉದ್ಘೋಷ, ಭಕ್ತರ ಗೋವಿಂದ ನಾಮಸ್ಮರಣೆ ಅನುರಣನೆ, ಮಲ್ಲಿಗೆ ಹೂವಿನ ಕಂಪು ಹರಡಿ ಗಮನಸೆಳೆಯಿತು. ಕರಗದ ಅರ್ಚಕ ಎ ಜ್ಞಾನೇಂದ್ರ ಅವರು ಪೂರ್ವ ಪೂಜಾಕ್ರಮಗಳನ್ನು ಮುಗಿಸಿಕೊಂಡು ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನಕ್ಕೆ ಬಂದರು. ಅಲ್ಲಿ ಹಸಿ ಕರಗ ಸ್ಥಾಪಿಸಿದ್ದ ಸ್ಥಳದಲ್ಲಿ ಚೈತ್ರ ಪೌರ್ಣಮಿಯ ಶನಿವಾರ ತಡರಾತ್ರಿ ಕರಗ ಶಕ್ತ್ಯೋತ್ಸವದ ವಿಧಿವಿಧಾನಗಳು ಜರುಗಿದವು. ಮಲ್ಲಿಗೆ ಹೂವಿನಿಂದ ಅಲಂಕೃತವಾಗಿದ್ದ ದ್ರೌಪದಿದೇವಿ ಕರಗ ಉತ್ಸವ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಬೆಂಗಳೂರು ಪೇಟೆಯ ಗಲ್ಲಿಗಲ್ಲಿಗೆ ಹೊರಟಿತು.
ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ನಡೆದ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ರಾತ್ರಿ 10.30ರ ಸುಮಾರಿಗೆ ತುಂತುರು ಮಳೆಯಲ್ಲಿಯೇ ಭೇಟಿ ನೀಡಿ ಪೂಜೆ ಸಲ್ಲಿಸಿದರು....
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.