ಭಾರತ, ಮಾರ್ಚ್ 23 -- Boeing Layoffs: ಅಮೆರಿಕದ ಪ್ರಮುಖ ವಿಮಾನ ನಿರ್ಮಾಣ ಕಂಪನಿ ಬೋಯಿಂಗ್ ತನ್ನ ಜಾಗತಿಕ ಉದ್ಯೋಗ ಕಡಿತ ಭಾಗವಾಗಿ ಬೆಂಗಳೂರಿನ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ. ಬೋಯಿಂಗ್ ಕಳೆದ ವರ್ಷವೇ ಜಾಗತಿಕ ಉದ್ಯೋಗಿ ಸಂಖ್ಯೆಯನ್ನು ಶೇಕಡ 10 ಕಡಿಮೆ ಮಾಡುವುದಾಗಿ ಘೋಷಿಸಿತ್ತು. ಅದರ ಭಾಗವಾಗಿ ಈ ಕ್ರಮವನ್ನು ಕಂಪನಿ ಜರುಗಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಮೂಲಗಳು ನೀಡಿದ ಮಾಹಿತಿ ಆಧರಿಸಿ ವರದಿ ಮಾಡಿದೆ.

ಬೋಯಿಂಗ್ ಕಂಪನಿ ಜಾಗತಿಕವಾಗಿ ತನ್ನ ಉದ್ಯೋಗಿಗಳ ಸಂಖ್ಯೆ ಕಡಿಮೆ ಮಾಡುವುದಾಗಿ ಘೋಷಿಸಿತ್ತು. ಇದರ ಭಾಗವಾಗಿ ಈಗ ಬೆಂಗಳೂರಿನ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಭಾರತದಲ್ಲಿ ಬೋಯಿಂಗ್ ಕಂಪನಿ ಉದ್ಯೋಗಿಗಳ ಸಂಖ್ಯೆ 7000ದ ಆಸುಪಾಸಿನಲ್ಲಿದೆ. ಕಂಪನಿಯ ಭಾರತದಲ್ಲಿ ವಿಶೇಷವಾಗಿ ಬೆಂಗಳೂರಿನ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಟೆಕ್ನಾಲಜಿ ಸೆಂಟರ್‌ನ 180 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿದೆ. ಡಿಸೆಂಬರ್ ಕೊನ...